ಮೂಲ: ಅರುಣ್ ಮೈರ (ದ ಹಿಂದೂ 29-5-21) ಅನುವಾದ : ನಾ ದಿವಾಕರ ಮಾನವ ಸಮಾಜದ ಅವಶ್ಯಕತೆಗಳು ಮತ್ತು ಬಂಡವಾಳ ವ್ಯವಸ್ಥೆಯ ತತ್ವಗಳ ಸಂಘರ್ಷಕ್ಕೆ ಕೋವಿದ್ 19 ಲಸಿಕೆಯ ಬಿಕ್ಕಟ್ಟು ಮತ್ತೊಂದು ವೇದಿಕೆಯಾಗಿ ಪರಿಣಮಿಸಿದೆ. ಲಸಿಕೆಯ ಸಂಶೋಧನೆ ಮತ್ತು ಉತ್ಪಾದನೆಯಲ್ಲಿ ತಮ್ಮ ಬಂಡವಾಳ ಮತ್ತು ಶ್ರಮದ ಹೂಡಿಕೆಗಾಗಿ ಖಾಸಗಿ ಉತ್ಪಾದಕರು ಲಾಭ ಪಡೆಯುವ...