ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮಪಂಚಾಯತ್ ಗೆ ಸೇರಿದ ರಸ್ತೆಯೊಂದಕ್ಕೆ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಹೆಸರಿಡಲಾಗಿದ್ದು, ಇಲ್ಲಿನ ಪಡುಗಿರಿ ಎಂಬಲ್ಲಿ ಈ ಫಲಕವನ್ನು ಅಳವಡಿಸಲಾಗಿದೆ ಎನ್ನಲಾಗಿದೆ. ಪಡುಗಿರಿಯ ಈ ರಸ್ತೆ ಸರ್ಕಾರಿ ರಸ್ತೆ ಎಂದು ಹೇಳಲಾಗಿದ್ದು, ಯಾರೋ ಖಾಸಗಿ ವ್ಯಕ್ತಿಗಳು ಈ ನಾಮಫಲಕವನ್ನು ಹಾಕಿದ್ದರು ಎನ್ನಲ...