ಉಳ್ಳಾಲ: ಪತಿ ಮೃತಪಟ್ಟು ಎರಡು ಗಂಟೆಯೊಳಗೆ ಪತ್ನಿಯೂ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಬುಧವಾರ ರಾತ್ರಿ ನಡೆದಿದ್ದು, ಪತಿ ಪತ್ನಿ ಇಬ್ಬರು ಕೂಡ ಒಂದೇ ದಿನ ಮೃತಪಟ್ಟಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಕಾಂಗ್ರೆಸ್ ಮುಖಂಡರೂ ಆಗಿರುವ ನಝೀರ್ ಅಹ್ಮದ್ ಅವರಿಗೆ ಬುಧವಾರ ತಡರಾತ್ರಿ ತೀವ್ರ ರಕ್ತದೊತ್...