ಅದೊಂದು ಕತ್ತಲ ಕೂಪ. ಸುತ್ತಲೂ ಕತ್ತಲು. ಅಲ್ಲಿ ಏನೂ ಕಾಣುತ್ತಿಲ್ಲ. ಆದರೆ, ಸ್ವಚ್ಛಂದ ಪ್ರದೇಶ ಅದು. ಯಾರ ಕಿರುಚಾಟವಿಲ್ಲ, ಅರಚಾಟವಿಲ್ಲ. ಅಲ್ಲಿ ಒಂದು ಪುಟ್ಟಮಗು ಜೀವ ತಳೆಯುತ್ತಿತ್ತು. ಆ ಮಗುವಿಗೆ ತಾಯಿಯನ್ನು ನೋಡಬೇಕು ಎನ್ನುವ ಕುತೂಹಲ. ತಾಯಿಗೂ ತನ್ನನ್ನು ನೋಡಬೇಕು ಎನ್ನುವ ಕುತೂಹಲ ಇರಬಹುದು ಎಂದು ಆ ಮಗು ಅಂದುಕೊಂಡಿದೆ. ಮಗು ಬೆಳೆಯುತ...