ಬೆಂಗಳೂರು: ತುಮಕೂರು ಬಳಿಯ ರೈಲ್ವೇ ಹಳಿಯ ಮೇಲೆ ವೃದ್ಧೆಯ ಮುಂಡ ಹಾಗೂ ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ಲಾರಿಯೊಂದರಲ್ಲಿ ರುಂಡ ಪತ್ತೆಯಾದ ಪ್ರಕರಣದ ಹಿಂದಿನ ರಹಸ್ಯ ಇದೀಗ ಬಯಲಾಗಿದ್ದು, ಅತ್ತೆಯನ್ನು ಸೊಸೆ ಭೀಕರವಾಗಿ ಹತ್ಯೆ ಮಾಡಿಸಿರುವುದು ಬೆಳಕಿಗೆ ಬಂದಿದೆ. 70 ವರ್ಷ ವಯಸ್ಸಿನ ನಿಂಗಮ್ಮ ಎಂಬವರು ಹತ್ಯೆಗೀಡಾಗಿರುವ ಮಹಿಳೆಯಾಗಿದ್ದಾರೆ...