ಹಳ್ಳಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊರೆಯುವ ಒಂದೆಲಗ ಔಷಧಿಯ ಗುಣವಿರುವ ಸಸ್ಯವಾಗಿದೆ. ನೆಲದಲ್ಲಿ ನೀರಿನಂಶ ಇರುವ ಪ್ರದೇಶದಲ್ಲಿ ಒಂದೆಲಗ ಹೆಚ್ಚಾಗಿ ಇರುತ್ತದೆ. ಕರಾವಳಿಯ ಭಾಗಕ್ಕೆ ಬಂದರೆ, ಅಡಿಕೆ ತೋಟಗಳಲ್ಲಿ, ಗದ್ದೆಗಳಲ್ಲಿ ಇವುಗಳು ಸಾಕಷ್ಟು ಪ್ರಮಾಣಗಳಲ್ಲಿ ದೊರೆಯುತ್ತವೆ. ಕೆಮ್ಮು, ಉಸಿರಾಟದ ತೊಂದರೆ ಇರುವವರು ಒಂದೆಲವನ್ನು ಬಳಸುವ...