ಅವನ ಹೆಸರು “ಬಿರ್ಜು ಕುಲು”. ಒಡಿಶಾದ ಸುಂದರ್ಘ್ ಜಿಲ್ಲೆಯ ಜಂಗತೋಲಿ ಗ್ರಾಮದ ವ್ಯಕ್ತಿ. 20 ವರ್ಷಗಳ ಹಿಂದೆ ಒಂದು ದಿನ ಆತ ದಿಢೀರ್ ಆಗಿ ನಾಪತ್ತೆಯಾಗುತ್ತಾನೆ. ಆ ಬಳಿಕ ಈತನನ್ನು ಯಾರೂ ಕಂಡಿಲ್ಲ. ಈತ ಎಲ್ಲಿ ಹೋದ ಎನ್ನುವುದು ಅವರ ಕುಟುಂಬಸ್ಥರಿಗೆ ಕೂಡ ಗೊತ್ತಿರಲಿಲ್ಲ. ಬಿರ್ಜು, ಒಡಿಶಾದ ಬುಡಕಟ್ಟು ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದ. ...