ಭಾರತದಲ್ಲಿ ಪ್ರಾದೇಶಿಕ ರಾಜಕೀಯ ಪಕ್ಷಗಳ ಸುದೀರ್ಘ ಇತಿಹಾಸವೇ ಇದೆ. ವಿಭಿನ್ನ ಕಾರಣಗಳಿಗಾಗಿ ರಾಷ್ಟ್ರ ರಾಜಕಾರಣದ ಪ್ರಾಬಲ್ಯ ಮತ್ತು ನಿಯಂತ್ರಣಗಳ ಹೊರತಾಗಿಯೂ ಕರ್ನಾಟಕವೂ ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳಲ್ಲೂ ಪ್ರಾದೇಶಿಕ ಪಕ್ಷಗಳು ತಮ್ಮ ಸುಭದ್ರ ನೆಲೆ ಕಂಡುಕೊಂಡಿವೆ. ಒಂದು ನಿರ್ದಿಷ್ಟ ಭೌಗೋಳಿಕ ವ್ಯಾಪ್ತಿಗೆ ಅನ್ವಯಿಸುವಂತಹ ರಾಜ್ಯ ಹಿತಾ...