ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಂವಾದ ಕಾರ್ಯಕ್ರಮದ ವೇಳೆ ಶಾಸಕ ರಾಮ್ ದಾಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹತ್ತಿರ ಕರೆದು, ಬೆನ್ನಿಗೆ ಗುದ್ದಿ, ಆತ್ಮೀಯವಾಗಿ ಮಾತನಾಡಿರುವುದು ಬಿಜೆಪಿ ವಲಯದಲ್ಲಿರುವವರಿಗೇ ಆಶ್ಚರ್ಯ ತಂದಿತ್ತು. ಪ್ರಧಾನಿ ಮೋದಿ ಜೊತೆಗೆ ರಾಮ್ ದಾಸ್ ಅವರಿಗೆ ಅಷ್ಟೊಂದು ಆತ್ಮೀಯತೆ ಇದೆಯೇ ಎಂದು ಮೂಗಿನ ಮೇ...