ಬೆಳಗಾವಿ: ಪಟಾಕಿ ಸಿಡಿದ ಪರಿಣಾಮ ದೇವರ ರಥಕ್ಕೆ ಬೆಂಕಿ ಹತ್ತಿಕೊಂಡ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮದಲ್ಲಿ ನಡೆದಿದ್ದು, ಕೆಲ ಕಾಲ ಭಕ್ತರು ಆತಂಕಕ್ಕೀಡಾದ ಘಟನೆ ನಡೆಯಿತು. ಶಿವಪೇಟೆಯಲ್ಲಿ ನಿನ್ನೆ ಶ್ರೀ ಜಡಿ ಶಂಕರಲಿಂಗ ದೇವರ 38ನೇ ವರ್ಷದ ಮಹಾರಥೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸ್ಥಳದಲ್ಲಿ ಕೆಲ ಭಕ್ತರು ಪಟಾಕ...