ನೆಲಮಂಗಲ: ಕೊರೊನಾದಿಂದ ಇಡೀ ಕುಟುಂಬವೇ ಸಾವಿನ ಹಾದಿ ಹಿಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ನಡೆದಿದೆ. ಕೊರೊನಾ ಸೋಂಕಿನ ಮೊದಲ ಅಲೆಯಲ್ಲಿ ಗಂಡ ಮತ್ತು ಅತ್ತೆಯನ್ನು ಕಳೆದುಕೊಂಡಿದ್ದ ಮಹಿಳೆಯೊಬ್ಬರು ಇದೀಗ ತಮ್ಮ ಮಗನ ಜೊತೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 40 ವರ್ಷ ವಯಸ್ಸಿನ ರೇಖಾ ಹಾಗೂ ಅವರ ಪುತ್ರ 22 ವರ್ಷ ವಯಸ...