ಮಂಗಳೂರು: ಇಡೀ ದೇಶವೇ COVID-19 ಎಂಬ ಜಾಗತಿಕ ಮಹಾಮಾರಿಯಿಂದ ನಲುಗುತ್ತಿರುವ ಸಮಯದಲ್ಲಿಯೂ ಮತ್ತು ಖಾಸಗಿ ಶಾಲೆಗಳ ಶುಲ್ಕಗಳ ವಿಚಾರದಲ್ಲಿ ಕೇಂದ್ರ ಶಿಕ್ಷಣ ಸಚಿವರ ನೇರ ಹಸ್ತಕ್ಷೇಪದ ನಂತರವೂ ಭಾರತದಾದ್ಯಂತದ ಖಾಸಗಿ ಶಾಲೆಗಳು ಅಮಾನವೀಯವಾಗಿ ಪೋಷಕರಿಂದ ಭಾರೀ ಶುಲ್ಕ ವಸೂಲಿ ಮಾಡುವುದನ್ನು ಮುಂದುವರೆಸುತ್ತಿವೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಖ...