ಕೋಲಾರ: ರಾಜ್ಯಾದ್ಯಂತ ಜನರು ಸಂಕ್ರಾಂತಿ ಆಚರಿಸುತ್ತಿದ್ದರೆ, ಇತ್ತ ಕೋಲಾರದಲ್ಲಿ ಮಾತ್ರ ಜನರು ಮನೆಯಿಂದ ಹೊರಬಾರದೇ ಭಯಾತಂಕದಿಂದ ದಿನ ಕಳೆದಿದ್ದಾರೆ. ಈ ದಿನ ಹಬ್ಬ ಆಚರಿಸಿದರೆ, ಜನ ಜಾನುವಾರುಗಳು ಸಾಯುತ್ತಾರೆ ಎಂಬ ನಂಬಿಕೆ ಇವರದ್ದು. ಈ ಘಟನೆ ನಡೆದಿರುವುದು ಕೋಲಾರ ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ. ಹಿಂದಿನಿಂದಲೂ ಗ್ರಾಮದಲ್ಲ...