ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನಲ್ಲಿ ವಿಚಿತ್ರ ಕುರಿಮರಿಯೊಂದರ ಜನನವಾಗಿದ್ದು, 1 ತಲೆ, 8 ಕಾಲು, 2 ದೇಹ ಹೊಂದಿರುವ ಕುರಿ ಮರಿ ಅಚ್ಚರಿಯನ್ನುಂಟು ಮಾಡಿದೆ. ಕಡೂರು ತಾಲೂಕಿನ ಕೇದಿಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜನನವಾದ ಕುರಿಮರಿಯ ಒಂದು ದೇಹಕ್ಕೆ ತಲೆಯೇ ಇಲ್ಲ, ಒಂದು ದೇಹ ಮತ್ತೊಂದು ದೇಹದ ಜೊತೆ ಸೇರ್ಪಡೆಗೊಂಡಿದೆ. ...