ಶೇಖ್ ಆದಂ ಸಾಹೇಬ್ ನೆಲ್ಯಾಡಿ ಶಿಕ್ಷಕ, ಸಂಘಟಕ, ಕ್ರಿಯಾಶೀಲ ಬೋಧಕರಾಗಿರುವ ಶೇಖ್ ಆದಂ ಸಾಹೇಬ್ ರವರು 2022ನೇ ಸಾಲಿನ, ಕರ್ನಾಟಕ ರಾಜ್ಯ ಜ್ಞಾನ ವಿಜ್ಞಾನ ಸಮಿತಿಯವರು ಕೊಡಮಾಡುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರು. ಕಡಬ ತಾಲೂಕಿನ ನೆಲ್ಯಾಡಿಯ ಕೌಕ್ರಾಡಿ ಗ್ರಾಮದವರಾದ ಇವರು ಪ್ರಸ್ತುತ ಬಂಟ್ವಾಳ ತಾಲೂಕಿನ ಕಾವಳಪಡ...