ಬೇಸಿಗೆ ಬಂತೆಂದರೆ ಸಾಕು ಬಿಸಿಲಿನ ತಾಪಕ್ಕೆ ಜನರು ಸುಸ್ತಾಗಿ ಬಿಡುತ್ತಾರೆ. ತೀರದ ದಾಹದ ನಡುವೆಯೇ ನಮ್ಮ ದೇಹದ ನೀರಿನಾಂಶ ಕಡಿಮೆಯಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಬಾರಿಯಂತೂ “ಬಿಸಿಲಿನ ತಾಪ ಸಹಿಸಲು ಸಾಧ್ಯವಾಗುತ್ತಿಲ್ಲ” ಎಂದು ಸಾಕಷ್ಟು ಸಂಖ್ಯೆಯ ಜನರು ಹೇಳುತ್ತಿದ್ದಾರೆ. ಬೇಸಿಗೆಯ ಸಂದರ್ಭದಲ್ಲಿ ಕೂಲಿ ಕಾರ್ಮ...