ತೂತುಕುಡಿ: ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವ್ಯಾನ್ ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಹಿಳೆಯರು ಸಾವನ್ನಪ್ಪಿ, 15 ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದೆ. ಗುರುವಾರ ಬೆಳಗ್ಗೆ ರೇಸ್ಕೋರ್ಸ್ ಬಳಿಯ ಪುತ್ತಿಯಮುತ್ತೂರು, ಮುತ್ತಲೈಪಟ್ಟಿ ಮತ್ತು ನಡುವಕುರಿಚಿ ಸೇರಿದಂತೆ ಪ್ರದೇಶಗಳಿಂ...