ಚೆನ್ನೈ: ತಮಿಳುನಾಡಿನ ವೆಲ್ಲೂರಿ(Vellore )ನಲ್ಲಿ ಚಾರ್ಜ್ ಮಾಡುತ್ತಿದ್ದ ವೇಳೆ ಎಲೆಕ್ಟ್ರಿಕ್ ಬೈಕ್ ಸ್ಫೋಟಗೊಂಡು ತಂದೆ ಮಗಳು ಸಾವನ್ನಪ್ಪಿದ ಘಟನೆ ನಡೆದಿದೆ. ವೆಲ್ಲೂರು ಸಮೀಪದ ಅಲ್ಲಾಪುರದ ಶಿವಪುರಂ ನಿವಾಸಿ ದುರೈ ವರ್ಮಾ (49) ಮತ್ತು ಅವರ ಪುತ್ರಿ ಮೋಹನ ಪ್ರೀತಿ (13) ಮೃತಪಟ್ಟವರು ಎಂದು ಗುರುತಿಸಲಾಗಿದೆ. ವರ್ಮಾ ಇತ್ತೀಚೆಗೆ ಎಲ...