ನಿಮ್ಮ ಮಗನನ್ನು ಶಾಲೆ ಬಿಡಿಸಿ, ತ್ರಿಶೂಲ ದೀಕ್ಷೆ ಕೊಡಿಸಿ: ಸುನೀಲ್ ಕುಮಾರ್ ಗೆ ಪ್ರಿಯಾಂಕ್ ಖರ್ಗೆ ಸವಾಲು

ಬೆಂಗಳೂರು: ಆರ್ ಎಸ್ ಎಸ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸುನೀಲ್ ಕುಮಾರ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ವಾಕ್ ಸಮರ ಮುಂದುವರಿದಿದೆ.
ಒಂದೆಡೆ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸುನೀಲ್ ಕುಮಾರ್, ಸಂಘ,ಸಂಘಸ್ಥಾನ, ಗಣವೇಶ ನಮಗೆ ಪ್ರಚಾರದ ಸರಕಲ್ಲ. ಅದು ಸಂಸ್ಕಾರ. ಅದು ನಮ್ಮ ಶ್ರದ್ಧೆಯ ಭಾಗ. “ಸ್ವಯಂಸೇವಕ”ತ್ವ ನಮಗೆ ಸಂಘ ನೀಡಿದ ನಿರಂತರ ಆಸ್ತಿ. ನನ್ನ ತಂದೆ ದಿ.ವಾಸುದೇವ ಸಂಘದ ಶ್ರದ್ಧೆಯ ಸ್ವಯಂಸೇವಕ. ಅವರೇ ನನ್ನನ್ನು ಸಂಘದ ಮಡಿಲಿಗೆ ಕರೆತಂದಿದ್ದು. ನಾನು ವಾಸುದೇವ ಸುನೀಲ್ ಕುಮಾರ್, ನನ್ನ ಮಗ ದತ್ತಾತ್ರೇಯ ಸುನೀಲ್ ಕುಮಾರ್ ಕೂಡಾ ಸಂಘದ ಸ್ವಯಂಸೇವಕ ಎಂದಿದ್ದರಲ್ಲದೇ, ನಾನು ನನ್ನ ಮಗನನ್ನು ಸ್ವಯಂಸೇವಕನಾಗಿ ಮಾಡುತ್ತೇನೆಯೇ ವಿನಾ ಶಾಸಕನನ್ನಾಗಿಯಲ್ಲ. “ಅಧಿಕಾರ ನನ್ನಪ್ಪನಿಂದ ನನಗೆ, ನನ್ನಿಂದ ನನ್ನ ಮುಂದಿನ ಪೀಳಿಗೆಗೆ” ಎಂದು ಯೋಚಿಸುವ ಕುಟುಂಬ ರಾಜಕಾರಣದ ಪಳೆಯುಳಿಕೆಗಳಿಗೆ ಈ ಪರಂಪರೆ ಅರ್ಥವಾಗುವುದೂ ಇಲ್ಲ ಎಂದಿದ್ದರು.
ಈ ಹೇಳಿಕೆಗೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ಒಂದು ದಿನ ಗಣ ವೇಷ ಹಾಕಿದರೆ ಅಲ್ಲ. ತ್ರಿಶೂಲ ದೀಕ್ಷೆ ಕೊಡಿಸಿ, ಶಾಲೆ ಕಾಲೇಜು ಬಿಡಿಸಿ ಶಾಖೆಗೆ ಕಳುಹಿಸಿ. ಪೂರ್ಣ ಪ್ರಮಾಣದ ಕಾರ್ಯಕರ್ತ ಮಾಡಿ” ಎಂದು ಸವಾಲು ಹಾಕಿದ್ದಾರೆ. ಅವರು ಹೇಳ್ತಾರೆ ಕುಟುಂಬ ರಾಜಕಾರಣ ಅಂತ. ಹಾಗಾದ್ರೆ ಯಡಿಯೂರಪ್ಪ ಕುಟುಂಬ ಏನು. ಇವರಿಗೇ ಸಿಗಬೇಕಿತ್ತಂತೆ ರಾಜ್ಯಾಧ್ಯಕ್ಷ ಸ್ಥಾನ. ಹಾಗಾದ್ರೆ ಯಾಕೆ ತಪ್ಪು? ಅಲ್ಲದೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಯಾಕೆ ರಾಜೀನಾಮೆ ಕೊಟ್ರು. ನನಗೆ ಇಂಟರೆಸ್ಟ್ ಇಲ್ಲ ಅಂತ ಯಾಕೆ ಹೇಳಿದರು ಎಂದು ಪ್ರಶ್ನಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD