ನಾನು ಡಿ.ಕೆ.ಸುರೇಶ್ ಪತ್ನಿ ಅಂತ ವಿಡಿಯೋ ಹರಿಯಬಿಟ್ಟಿದ್ದ ಶಿಕ್ಷಕಿಯ ಬಂಧನ!

ರಾಮನಗರ: ನಾನು ಮಾಜಿ ಸಂಸದ, ಡಿ.ಕೆ.ಸುರೇಶ್ ಅವರ ಪತ್ನಿ ಅಂತ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಯಬಿಟ್ಟಿದ್ದ ಮಹಿಳೆಯ ವಿರುದ್ಧ ರಾಮನಗರ ಸೆನ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಮಹಿಳೆಯನ್ನು ಬಂಧಿಸಲಾಗಿದೆ.
ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದ ಮಹಿಳೆ ಪವಿತ್ರ ಬಂಧಿತ ಮಹಿಳೆಯಾಗಿದ್ದಾರೆ. ಇವರ ವಿರುದ್ಧ ಡಿ.ಕೆ.ಸುರೇಶ್ ಪರ ವಕೀಲ ಪ್ರದೀಪ್ ನೀಡಿದ ದೂರಿನನ್ವಯ ಮಹಿಳೆಯನ್ನು ಬಂಧಿಸಲಾಗಿದೆ.
ವಿಡಿಯೋದಲ್ಲಿ ಮಾತನಾಡಿದ್ದ ಮಹಿಳೆ, ತಾನು ಮೊದಲು ಡಿ.ಕೆ.ಸುರೇಶ್ ರವರ ಹೆಂಡತಿಯಾಗಿ ಹೇಳಬೇಕೆಂದರೆ, ಪಸ್ಟ್ ಡಿ.ಕೆ ಸುರೇಶ್ ರವರ ಅಭಿಮಾನಿ. ಯಾಕೆಂದರೆ 3 ಸಾರಿ ಎಂಪಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಯಾರು ಮಾಡುವುದಕ್ಕೆ ಆಗುವುದಿಲ್ಲ. ಇಂತವರ ನನ್ನ ಗಂಡ ಎಂದು ಹೇಳಿಕೊಳ್ಳಲು ಖುಷಿ ಪಡುತ್ತೇನೆ ಎಂದು ಮಹಿಳೆ ಹೇಳಿಕೊಂಡಿದ್ದರು.
ಏಪ್ರಿಲ್ 8ರಂದು ಫೇಸ್ ಬುಕ್ ಹಾಗೂ ಇನ್ ಸ್ಟಾಗ್ರಾಮ್ ನಲ್ಲಿ ತನ್ನ ಡಿ.ಕೆ.ಸುರೇಶ್ ಫೋಟೋದೊಂದಿಗೆ ತನ್ನ ಫೋಟೋ ಸೇರಿಸಿ ಎಡಿಟ್ ಮಾಡಿ ವಿಡಿಯೋ ಹರಿಯಬಿಟ್ಟಿದ್ದರು.
ಆರೋಪಿ ಮಹಿಳೆ ಪವಿತ್ರ ಮೈಸೂರಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಗಂಡನಿಂದ ವಿಚ್ಛೇದನ ಪಡೆದಿದ್ದ ಮಹಿಳೆ ಮೈಸೂರಿನಲ್ಲಿ ವಾಸವಿದ್ದಾರೆ. ಮೈಸೂರಿನಲ್ಲಿ ಅಕ್ಕ ಪಕ್ಕದ ಮನೆಯವರು ಕಿರಿಕಿರಿ ಮಾಡುತ್ತಿದ್ದು, ತಾನು ಡಿ.ಕೆ.ಸುರೇಶ್ ಪತ್ನಿ ಎಂದು ಹೇಳಿದರೆ ಎಲ್ಲರೂ ಹೆದರುತ್ತಾರೆಂದು ವಿಡಿಯೋ ಮಾಡಿ ಹರಿಯಬಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: