ಸರಸ್ವತಿ ದೇವಿಗೆ ಅಗೌರವ ಆರೋಪ: ರಾಜಸ್ಥಾನದಲ್ಲಿ ಶಿಕ್ಷಕಿ ಅಮಾನತು

ಸರಸ್ವತಿ ದೇವಿಗೆ ಅಗೌರವ ತೋರಿದ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಮೇಲೆ ರಾಜಸ್ಥಾನದ ಬರಾನ್ ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಸ್ಥಾನದ ಶಿಕ್ಷಣ ಸಚಿವ ಮದನ್ ದಿಲಾವರ್ ಅವರ ಆದೇಶದ ಮೇರೆಗೆ ಪ್ರಾಥಮಿಕ ಶಾಲಾ ಶಿಕ್ಷಕಿ ಹೇಮಲತಾ ಬೈರ್ವಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಸಚಿವರು ಸಾರ್ವಜನಿಕವಾಗಿ ಹೇಳಿಕೆ ನೀಡಿದ ಒಂದು ದಿನದ ನಂತರ, ಬರಾನ್ ಜಿಲ್ಲೆಯ ಕಿಶನ್ಗಂಜ್ ಪ್ರದೇಶದ ಲಕ್ಡೈ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೇಮಕಗೊಂಡ ಪ್ರಬೋಧಕ್ ಲೆವೆಲ್ 1 ಶಿಕ್ಷಕಿ ಹೇಮಲತಾ ಬೈರ್ವಾ ಅವರನ್ನು ಅಮಾನತುಗೊಳಿಸಿ ಬರಾನ್ ಜಿಲ್ಲಾ ಶಿಕ್ಷಣ (ಪ್ರಾಥಮಿಕ) ಅಧಿಕಾರಿ ಆದೇಶ ಹೊರಡಿಸಿದ್ದಾರೆ.
ಶಿಕ್ಷಕಿ ಬೈರ್ವಾ ವಿರುದ್ಧ ಧಾರ್ಮಿಕ ಭಾವನೆಗಳನ್ನು ನೋಯಿಸಿದ ಮತ್ತು ಪ್ರಚೋದಿಸಿದ ಪ್ರಾಥಮಿಕ ವಿಚಾರಣೆ ಮುಗಿದ ನಂತರ ಅಮಾನತು ಆದೇಶ ಹೊರಡಿಸಲಾಗಿದೆ ಎಂದು ಬರಾನ್ ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿ ಹೇಳಿದ್ದಾರೆ.
ಕಿಶನ್ ಗಂಜ್ ಪ್ರದೇಶದ ಲಕಾಡಿಯಾದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸರಸ್ವತಿ ದೇವಿಯ ಚಿತ್ರವನ್ನು ವೇದಿಕೆಯ ಮೇಲೆ ಇರಿಸಿದ ವಿವಾದದ ಬಗ್ಗೆ ಆರಂಭಿಕ ತನಿಖೆಯಲ್ಲಿ, ಶಿಕ್ಷಕಿ ಸ್ಥಳೀಯ ಜನರ ಧಾರ್ಮಿಕ ಭಾವನೆಗಳನ್ನು ನೋಯಿಸಿದ ಮತ್ತು ಪ್ರಚೋದಿಸಿದ್ದಾರೆ ಎಂಬುದು ಕಂಡುಬಂದಿದೆ ಮತ್ತು ಅದರ ಆಧಾರದ ಮೇಲೆ ಅವರನ್ನು ಅಮಾನತುಗೊಳಿಸಲು ಆದೇಶ ಹೊರಡಿಸಲಾಗಿದೆ. ಬರಾನ್ ಜಿಲ್ಲಾ ಶಿಕ್ಷಣ (ಪ್ರಾಥಮಿಕ) ಅಧಿಕಾರಿ ಪಿಯೂಷ್ ಕುಮಾರ್ ಶರ್ಮಾ ಅವರು ಪಿಟಿಐಗೆ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth