ಇಸ್ರೇಲ್ ಗೆ ಗುಡ್ ಬೈ ಹೇಳಿದ ಟೆಕ್ ದೈತ್ಯ ಕಂಪನಿ ಸ್ಯಾಮ್ಸಂಗ್

ದಕ್ಷಿಣ ಕೊರಿಯಾದ ಟೆಕ್ ದೈತ್ಯ ಕಂಪನಿಯಾದ ಸ್ಯಾಮ್ಸಂಗ್ ಇಸ್ರೇಲ್ ಗೆ ಗುಡ್ ಬೈ ಹೇಳಿದೆ. ಸ್ಯಾಮ್ಸಂಗ್ ಇನ್ನೋವೇಶನ್ ನ ಬ್ರಾಂಚ್ ಆಗಿರುವ ಸ್ಯಾಮ್ಸಂಗ್ ನೆಸ್ಟ್ ಇಸ್ರೇಲ್ ನಲ್ಲಿ ಚಟುವಟಿಕೆಯಲ್ಲಿತ್ತು. ಆದರೆ ಗಾಝಾದ ಮೇಲೆ ಇಸ್ರೇಲ್ ದಾಳಿ ನಡೆಸಿದ ಬಳಿಕ ಇಸ್ರೇಲ್ ನ ಆರ್ಥಿಕ ವ್ಯವಸ್ಥೆ ತೀವ್ರ ಕುಸಿದಿರುವುದರ ಪರಿಣಾಮವಾಗಿ ಇದೀಗ ಕಂಪನಿ ಬಾಗಿಲು ಮುಚ್ಚಲು ತೀರ್ಮಾನಿಸಿದೆ.
ಇಸ್ರೇಲ್ ನ ಟೆಲ್ ಅವಿವ್ ನಲ್ಲಿರುವ ತಮ್ಮ ಕಂಪನಿಯನ್ನು ಮುಚ್ಚುತ್ತಿದ್ದೇವೆ ಎಂದು ಸಿಬ್ಬಂದಿಗಳಿಗೆ ಈಗಾಗಲೇ ಕಂಪನಿ ತಿಳಿಸಿದೆ. ಅತ್ಯಂತ ಅಸಹಜ ಪರಿಸ್ಥಿತಿಯಲ್ಲಿ ನಾವು ಈ ಕ್ರಮ ಕೈಗೊಳ್ಳಬೇಕಾಯಿತು ಎಂದು ಕೂಡ ಸಿಬ್ಬಂದಿಗಳಿಗೆ ಕಳುಹಿಸಲಾದ ಈ ಮೇಲ್ ನಲ್ಲಿ ತಿಳಿಸಲಾಗಿದೆ.
ಗಾಝಾದ ಮೇಲೆ ದಾಳಿಯ ಬಳಿಕ ಇಸ್ರೇಲ್ ನಿಂದ ಕಂಬಿ ಕೀಳುತ್ತಿರುವ ಮೊದಲ ದೈತ್ಯ ಕಂಪೆನಿ ಇದಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth