3:26 AM Tuesday 16 - December 2025

ಅಮೆರಿಕದ ಅಟ್ಲಾಂಟಾದಲ್ಲಿ ಗುಂಡಿನ ದಾಳಿ: ಹದಿಹರೆಯದ ಬಾಲಕಿ ಸೇರಿ ಮೂವರ ಸಾವು

24/09/2023

ಅಮೆರಿಕದ ಜಾರ್ಜಿಯಾದ ರಾಜಧಾನಿ ಅಟ್ಲಾಂಟಾದ ಶಾಪಿಂಗ್ ಮಾಲ್ ಬಳಿ ನಡೆದ ಗುಂಡಿನ ದಾಳಿಯಲ್ಲಿ ಬಾಲಕಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನೈಋತ್ಯ ಅಟ್ಲಾಂಟಾದ ಇವಾನ್ಸ್ ಸ್ಟ್ರೀಟ್ ನಲ್ಲಿ ಈ ಘಟನೆ ನಡೆದಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಅವರಲ್ಲಿ ಒಬ್ಬರು ಪಿಸ್ತೂಲ್ ತೆಗೆದುಕೊಂಡು ಗುಂಡು ಹಾರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಗುಂಡೇಟಿಗೆ ಬಲಿಯಾದ ಮೂವರೂ ಮೃತಪಟ್ಟಿದ್ದಾರೆ.
ಮೃತಪಟ್ಟವರಲ್ಲಿ ಬಾಲಕಿಗೆ 17 ವರ್ಷ, ಇನ್ನೊಬ್ಬನಿಗೆ 20 ವರ್ಷ ಮತ್ತು ಮೂರನೆಯವನಿಗೆ 30 ವರ್ಷ ವಯಸ್ಸಾಗಿತ್ತು.

ಗುಂಡಿನ ದಾಳಿಯ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಇತ್ತೀಚಿನ ಸುದ್ದಿ

Exit mobile version