3:54 PM Saturday 24 - January 2026

ತಾಯಿ ಪೊಲೀಸರಿಗೆ ದೂರು ಕೊಡುತ್ತಾಳೆ ಎಂದು ಹೆದರಿ ವಿಷ ಕುಡಿದ ಮಗ!

death
30/01/2022

ನವದೆಹಲಿ: ತಾಯಿ ಪೊಲೀಸರಿಗೆ ದೂರು ಕೊಡುತ್ತಾಳೆ ಎಂದು ಹೆದರಿ ಪುತ್ರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಗುರುಗ್ರಾಮ್ ಸೆಕ್ಟರ್ ನ ಗಾಂಧಿ ನಗರದಲ್ಲಿ ನಡೆದಿದೆ.

ಸಹೋದರಿಗೆ ನೋಡಿದ ವರ ಸರಿಯಿಲ್ಲ ಎಂದು ತಾಯಿಯ ಜೊತೆಗೆ ಜಗಳ ಮಾಡಿದ್ದ ಮಗ, ಜಗಳ ತೀವ್ರಗೊಂಡು ತಾಯಿಗೆ ಹಲ್ಲೆ ಮಾಡಿದ್ದ ಎನ್ನಲಾಗಿದೆ. ತಾಯಿ ಪೊಲೀಸರಿಗೆ ದೂರು ನೀಡುತ್ತಾಳೆ ಎಂದು ಹೆದರಿ ವಿಷ ಸೇವಿಸಿದ್ದಾನೆ ಎನ್ನಲಾಗಿದೆ.

ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ. ಈ ವ್ಯಕ್ತಿ ಕಡಲೆಕಾಯಿ ವ್ಯಾಪಾರಸ್ಥನಾಗಿದ್ದು, ತನ್ನ ಪತ್ನಿ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಎನ್ನಲಾಗಿದೆ. ಸಹೋದರಿಗೆ ಮದುವೆ ಫಿಕ್ಸ್ ಆಗಿದೆ ಅನ್ನೋ ಮಾಹಿತಿ ಸಿಕ್ಕಿದಾಗ ವರ ಸರಿಯಿಲ್ಲ ಎಂದು ತಾಯಿಯ ಬಳಿ ಜಗಳವಾಡಲು ಬಂದಿದ್ದ. ಜಗಳ ವಿಕೋಪಕ್ಕೆ ಹೋಗಿ ತಾಯಿಗೆ ಇಟ್ಟಿಗೆಯಿಂದ ಹೊಡೆದಿದ್ದ.

ತಾಯಿ ಪೊಲೀಸರಿಗೆ ದೂರು ನೀಡುತ್ತಾಳೆ. ಹೆದರಿದ ಪುತ್ರ ಬಳಿಕ ಇಲ್ಲಿನ ಆಸ್ಪತ್ರೆಯೊಂದರ ಸಮೀಪಕ್ಕೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಹಿಳಾ ಸಬ್ ಇನ್ಸ್ ಪೆಕ್ಟರ್ ಮೇಲೆ ಬಿಜೆಪಿ ಮುಖಂಡನಿಂದ ಅತ್ಯಾಚಾರ

ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಒತ್ತಾಯ

ಮಗುಚಿ ಬಿದ್ದ 10 ಜನರು ಪ್ರಯಾಣಿಸುತ್ತಿದ್ದ ದೋಣಿ: ಇಬ್ಬರು ನೀರುಪಾಲು

ಆತಂಕಕಾರಿ ಸುದ್ದಿ: ಆಹಾರಕ್ಕಾಗಿ ಕಿಡ್ನಿಯನ್ನು ಮಾರಾಟ ಮಾಡುತ್ತಿರುವ ಅಫ್ಘಾನ್ನರು

ಸುಶಾಂತ್ ಸಿಂಗ್ ರಜಪೂತ್ ಡೆತ್​ ಕೇಸ್​: ಎನ್ ​ಸಿ ಬಿ ಯಿಂದ ಮತ್ತೋರ್ವ ಆರೋಪಿಯ ಬಂಧನ

 

ಇತ್ತೀಚಿನ ಸುದ್ದಿ

Exit mobile version