6:57 AM Wednesday 20 - August 2025

ನಮ್ಮನ್ನು ಬದುಕಲು ಬಿಡಲಿಲ್ಲ, ತಾಳ್ಮೆಗೆಟ್ಟು ಹತ್ಯೆ ಮಾಡಿದ್ವಿ!: ಚಂದ್ರಶೇಖರ್ ಗುರೂಜಿ ಹಂತಕರಿಂದ ತಪ್ಪೊಪ್ಪಿಗೆ!?

chandrashekhar guruji
07/07/2022

ಹುಬ್ಬಳ್ಳಿ:  ನಮ್ಮ ಪ್ರತಿ ಕೆಲಸಗಳಿಗೂ ಸ್ವಾಮೀಜಿ ಅಡ್ಡಗಾಲು ಹಾಕುತ್ತಿದ್ದರು. ನಮ್ಮನ್ನು ಬದುಕಲು ಬಿಡಲಿಲ್ಲ. ಹೀಗಾಗಿ ತಾಳ್ಮೆಗೆಟ್ಟು ಹತ್ಯೆ ಮಾಡಿದ್ದೇವೆ ಎಂದು ಚಂದ್ರಶೇಖರ್ ಗುರೂಜಿ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಆರೋಪಿಗಳನ್ನು ತೀವ್ರ ತನಿಖೆಗೊಳಪಡಿಸುತ್ತಿದ್ದು, ಈ ವೇಳೆ ಆರೋಪಿಗಳು ಕೊಲೆಯ ಹಿಂದಿನ ಕಾರಣವನ್ನು ತಿಳಿಸಿದ್ದಾರೆ ಎನ್ನಲಾಗಿದೆ.

ವರದಿಗಳ ಪ್ರಕಾರ,  ಚಂದ್ರಶೇಖರ್ ಗುರೂಜಿ ಬಳಿಯೇ 10-12 ವರ್ಷ ಕೆಲಸ ಮಾಡಿದ್ದೇವೆ, 2016ರಲ್ಲೇ ಕೆಲಸ ಬಿಟ್ಟಿದ್ದೇವೆ. ಅಲ್ಲಿಂದ ಹೊರಬಂದ ಬಳಿಕ ನಮ್ಮ ಪಾಡಿಗೆ ನಾವು ಸ್ವಂತ ಉದ್ಯೋಗ ಮಾಡುತ್ತಾ ಜೀವನ ಸಾಗಿಸುತ್ತಿದ್ದೆವು. ನಮ್ಮ ಪ್ರತಿ ಕೆಲಸಕ್ಕೂ ಗುರೂಜಿ ಅಡ್ಡಗಾಲು ಹಾಕುತ್ತಿದ್ದರು. ಬದುಕುವುದಕ್ಕೂ ಬಿಡುತ್ತಿರಲಿಲ್ಲ, ವ್ಯಾಪಾರ ಮಾಡಲು ಸಹ ನಮ್ಮನ್ನು ಬಿಡಲಿಲ್ಲ. ಅಷ್ಟೊಂದು ಕಿರುಕುಳ ಗುರೂಜಿ ನೀಡಿದ್ರು ಎಂದು ಆರೋಪಿಗಳು ತಿಳಿಸಿದ್ದಾರೆನ್ನಲಾಗಿದೆ.

ರಿಯಲ್ ಎಸ್ಟೇಟ್ ಸೇರಿ ವಿವಿಧ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದೇವೆ.  ಆದರೆ ನಾವು ಎಲ್ಲೇ ಬ್ಯುಸಿನೆಸ್ ಮಾಡಿದ್ರೂ ಗುರೂಜಿ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದರು. ಒಂದಿಲ್ಲೊಂದು ಸಮಸ್ಯೆ ತಂದಿಡುತ್ತಿದ್ದರು. ಬೇರೆ ಊರುಗಳಲ್ಲಿ ನಾವು ಬ್ಯುಸಿನೆಸ್ ಗೆ ಇಳಿದ್ರೂ ಅವರ ಕಿರಿಕಿರಿ ತಪ್ಪಿರಲಿಲ್ಲ. ಹೀಗಾಗಿ ತಾಳ್ಮೆಗೆಟ್ಟು ನಾವು ಹತ್ಯೆ ಮಾಡಿದ್ದೇವೆ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version