2:43 AM Wednesday 22 - October 2025

ತಂದೆಯನ್ನು ಹತ್ಯೆ ಮಾಡಲು ಸ್ನೇಹಿತರಿಗೆ ಸುಪಾರಿ ನೀಡಿದ ಪಾಪಿ ಪುತ್ರ!

gowribidanur
25/06/2021

ಗೌರಿಬಿದನೂರು: ತಂದೆಯ ಹತ್ಯೆಗೆ ಸ್ವಂತ ಮಗನೇ ತನ್ನ ಸ್ನೇಹಿತರಿಗೆ ಸುಪಾರಿ ನೀಡಿರುವ ಘಟನೆ ತಾಲೂಕಿನ ಜೋಡಿಬಿಸಲಹಳ್ಳಿಯಲ್ಲಿ ನಡೆದಿದ್ದು, ತಂದೆಯನ್ನು ಹತ್ಯೆ ಮಾಡಲು ಪುತ್ರ 1 ಲಕ್ಷ ರೂಪಾಯಿ ಸುಪಾರಿ ನೀಡಿದ್ದ ಎಂದು ಇದೀಗ ತಿಳಿದು ಬಂದಿದೆ.

ಜೂನ್ 14ರಂದು 59 ವರ್ಷ ವಯಸ್ಸಿನ ಬಿ.ಎನ್.ಶ್ರೀನಿವಾಸಮೂರ್ತಿ ಎಂಬವರನ್ನು  ರೇಷ್ಮೆ ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ವೇಳೆ ಹತ್ಯೆ ಮಾಡಲಾಗಿತ್ತು.  ಶ್ರೀನಿವಾಸ ಮೂರ್ತಿ ಅವರ ಹಿರಿಯ ಮಗ ರೋಹಿತ್ ತನ್ನ ಸ್ನೇಹಿತರಾದ ರಂಗನಾಥ್ ಹಾಗೂ ಶ್ರಾವಂಡಹಳ್ಳಿಯ ರವಿಕುಮಾರ್ ಗೆ 1 ಲಕ್ಷ ರೂಪಾಯಿ ಸುಪಾರಿ ನೀಡಿ ಈ ಕೃತ್ಯ ನಡೆಸಿರುವುದು ಇದೀಗ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.

ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಸೇರಿಕೊಂಡ ಆರೋಪಿಗಳು ಹತ್ಯೆಗೆ ಸಂಚು ರೂಪಿಸಿದ್ದರು. ರೇಷ್ಮೇ ತೋಟದಲ್ಲಿ ಹೊಂಚು ಹಾಕಿದ್ದ ರವಿ ಕುಮಾರ್ ಹಾಗೂ ರಂಗನಾಥ್ ಶ್ರೀನಿವಾಸ್ ಮೂರ್ತಿ ಅವರನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಹತ್ಯೆ ಮಾಡಿದ್ದರು ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

Exit mobile version