5:19 PM Saturday 24 - January 2026

ತಂದೆಯನ್ನು ಮನೆಯಿಂದ ಹೊರಹಾಕಿದ ಪುತ್ರನಿಗೆ ತಕ್ಕಶಾಸ್ತಿ

senior
25/01/2022

ಚಿಕ್ಕಬಳ್ಳಾಪುರ: ಮನೆಯಿಂದ ತಂದೆಯನ್ನು ಬಲವಂತಾಗಿ ಹೊರಹಾಕಿದ್ದ‌ ಪುತ್ರನಿಗೆ ನ್ಯಾಯಾಲಯವು ತಕ್ಕ ಶಿಕ್ಷೆ ನೀಡಿದೆ. ಮನೆಯಿಂದ ಪುತ್ರನನ್ನೇ ಹೊರಹಾಕುವಂತೆ ಕೋರ್ಟ್‌ ಪೊಲೀಸರಿಗೆ ಸೂಚನೆ ನೀಡಿದೆ.

ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಅಂಜನಿ ಬಡಾವಣೆಯಲ್ಲಿ ನಡೆದಿದೆ. ನಿವೃತ್ತ ಪ್ರಾಧ್ಯಾಪಕ ಮುನಿಸ್ವಾಮಿ ಅವರನ್ನು ಪುತ್ರ ಎಂ.ಸುಭಾಷ್ ಮತ್ತು ಸೊಸೆ ಮಂಜುಳಾ ಬಲವಂತಾಗಿ ಮನೆಯಿಂದ ಹೊರಹಾಕಿದ್ದರು. ಅಂಜನಿ ಬಡಾವಣೆಯ ಮನೆಯನ್ನು ಮುನಿಸ್ವಾಮಿ ಸ್ವಯಾರ್ಜಿತವಾಗಿ ಖರೀದಿಸಿದ್ದರು.

ಪುತ್ರ ಮನೆಯಿಂದ ಹೊರ ಹಾಕಿದ್ದನ್ನು ಪ್ರಶ್ನಿಸಿ ಚಿಕ್ಕಬಳ್ಳಾಪುರದ ಎಸಿ ಕೋರ್ಟ್ ಮತ್ತು ಹೈಕೋರ್ಟ್​ಗಳಲ್ಲಿ ಮುನಿಸ್ವಾಮಿ ಅರ್ಜಿ ಸಲ್ಲಿಸಿದ್ದರು. ಇದೀಗ ವಿಚಾರಣೆ ನಡೆಸಿರುವ ಕೋರ್ಟ್​, ಅಕ್ರಮವಾಗಿ ಮನೆ ಪ್ರವೇಶಿಸಿದ್ದ ಪುತ್ರ ಸುಭಾಷ್ ಮತ್ತು ಸೊಸೆ ಮಂಜುಳಾರನ್ನು ಹೊರಹಾಕಿ ಮುನಿಸ್ವಾಮಿ ಪ್ರವೇಶ ಕಲ್ಪಿಸುವಂತೆ ಪೊಲೀಸರಿಗೆ ಆದೇಶ ಹೊರಡಿಸಿದೆ.

ಕೋರ್ಟ್ ​ನ ಆದೇಶದಂತೆ ಪುತ್ರ ಮತ್ತು ಸೊಸೆಯನ್ನ ಹೊರಹಾಕಿರುವ ಚಿಂತಾಮಣಿ ಪೊಲೀಸರು ಮುನಿಸ್ವಾಮಿಗೆ ಪ್ರವೇಶ ಕಲ್ಪಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಹೋದ್ಯೋಗಿ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ ಹೈಕೋರ್ಟ್‌ ಜಾಮೀನು

ವಿಷಕಾರಿ ಹಾವನ್ನು ಕೊರಳಿಗೆ ಸುತ್ತಿ ಮುತ್ತಿಟ್ಟವನ ಸ್ಥಿತಿ ಚಿಂತಾಜನಕ

ಹೆಂಡ್ತಿ ಆಸೆ ತೀರಿಸಲಾಗದೆ ಪತಿ ಆತ್ಮಹತ್ಯೆ

ರೈಲಿನಲ್ಲಿ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ 1.48 ಕೋಟಿ ರೂ. ನಗದು, ಚಿನ್ನಾಭರಣ ವಶ

ಸೇತುವೆಯಿಂದ ಕೆಳಗೆ ಬಿದ್ದ ಕಾರು: ಶಾಸಕನ ಮಗ ಸೇರಿ ಏಳು ವೈದ್ಯಕೀಯ ವಿದ್ಯಾರ್ಥಿಗಳು ಸಾವು

 

ಇತ್ತೀಚಿನ ಸುದ್ದಿ

Exit mobile version