‘ದಿ ಕೇರಳ ಸ್ಟೋರಿ’ ಚಿತ್ರದ ನಟಿ, ನಿರ್ದೇಶಕನಿಗೆ ಅಪಘಾತದಲ್ಲಿ ಗಾಯ

ಇತ್ತೀಚೆಗೆ ತೆರೆಗೆ ಬಂದ ‘ದಿ ಕೇರಳ ಸ್ಟೋರಿ’ ಎಂಬ ಚಿತ್ರದ ನಟಿ ಹಾಗೂ ಸಿನಿಮಾ ನಿರ್ದೇಶಕ ಸುದಿಪ್ರೋ ಸೇನ್ ಅವರಿಗೆ ಅಪಘಾತದಲ್ಲಿ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗದೇ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭಾನುವಾರ ನಟಿ ಅದಾ ಶರ್ಮಾ ಹಾಗೂ ನಿರ್ದೇಶಕ ಸುದಿಪ್ತೋ ಸೇನ್ ಕರೀಮ್ ನಗರದಲ್ಲಿ ನಡೆಯಬೇಕಿದ್ದ ಹಿಂದೂ ಏಕತಾ ಯಾತ್ರಾದಲ್ಲಿ ಭಾಗಿಯಾಗಲು ತೆರಳಬೇಕಿತ್ತು. ಆದರೆ ಅದಕ್ಕೂ ಮೊದಲೇ ರಸ್ತೆ ಅಪಘಾತವಾಗಿದೆ ಎನ್ನಲಾಗಿದೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ, ಅಪಘಾತದ ಬಗ್ಗೆ ಸುಳ್ಳು ಸುದ್ದಿ ಹಬ್ಬಿರುವುದರಿಂದಾಗಿ ಸಾಕಷ್ಟು ಮೆಸೆಜ್ ಗಳು ಬರುತ್ತಿವೆ. ಇಡೀ ತಂಡ ನಾವು ಆರೋಗ್ಯವಾಗಿದ್ದೇವೆ. ಇದು ಗಂಭೀರ ಅಪಘಾತವಲ್ಲ ಎಂದು ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw