ಚಾರ್ಚ್ ಮಾಡಿ ಸ್ಟಾರ್ಟ್ ಮಾಡುತ್ತಿದ್ದಂತೆ ಹೊತ್ತಿ ಉರಿದ ಇ– ಬೈಕ್

chamarajanagara
06/08/2023

ಚಾಮರಾಜನಗರ: ಚಾರ್ಚ್ ಮಾಡಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ನ್ನು ಸ್ಟಾರ್ಟ್ ಮಾಡಿದ ವೇಳೆ ಧಗಧಗನೇ ಹೊತ್ತಿ ಉರಿದಿರುವ ಘಟನೆ ಚಾಮರಾಜನಗರ ತಾಲೂಕಿನ‌ ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದೆ‌.

ಕೊತ್ತಲವಾಡಿ ಗ್ರಾಮದ ಬಸವರಾಜಪ್ಪ ಎಂಬವರಿಗೆ ಸೇರಿದ ಬೈಕ್ ಇದಾಗಿದ್ದು ಚಾರ್ಜ್ ಮಾಡಿ ಬೈಕನ್ನು ಸ್ಟಾರ್ಟ್ ಮಾಡಿದ ವೇಳೆ ಹೊಗೆ ಕಾಣಿಸಿಕೊಂಡಿದೆ, ಇದರಿಂದ ಆತಂಕಗೊಂಡು ಹಿಂದೆ ಸರಿದ ವೇಳೆ ದಿಢೀರನೇ ಬೆಂಕಿ ಜ್ವಾಲೆ ಕಾಣಿಸಿಕೊಂಡು ಹೊತ್ತಿ ಉರಿದಿದ್ದು ಅದೃಷ್ಟವಶಾತ್ ಮತ್ತೊಂದು ಬೈಕ್ ಗೆ ಹಾಗೂ ಮನೆಗೆ ಬೆಂಕಿ ವ್ಯಾಪಿಸಿಲ್ಲ.

ಕೂಡಲೇ, ಕೆಲ ಯುವಕರು ಸೇರಿ ಉರಿಯುತ್ತಿದ್ದ ಬೈಕ್ ಗೆ ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ. ಬೆಳ್ಳಂಬೆಳಗ್ಗೆ ಇ-ಬೈಕ್ ಸವಾರನಿಗೆ ದೊಡ್ಡ ಶಾಕ್ ಕೊಟ್ಟಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version