12:40 AM Thursday 21 - August 2025

ಯುಎಪಿಎ ಅಡಿಯಲ್ಲಿ ‘ಜಾಮೀನು ನಿಯಮ, ಜೈಲು ಅಪವಾದ’ ಕಾನೂನು ತತ್ವ ಆನ್ವಯಿಸುತ್ತೆ: ಸುಪ್ರೀಂಕೋರ್ಟ್

13/08/2024

‘ಜಾಮೀನು ನಿಯಮ, ಜೈಲು ಅಪವಾದ’ ಎಂಬ ಕಾನೂನು ತತ್ವವು ಯುಎಪಿಎ ಯಂತಹ ವಿಶೇಷ ಕಾನೂನುಗಳಡಿ ಅಪರಾಧಗಳಿಗೂ ಅನ್ವಯಿಸುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಹೇಳಿದೆ. ಯುಎಪಿಎ ಅಡಿ ಆರೋಪಿಗೆ ಜಾಮೀನು ಮಂಜೂರು ಮಾಡಿದ ಸಂದರ್ಭದಲ್ಲಿ ನ್ಯಾಯಾಲಯದ ಈ ಅವಲೋಕನವು ಹೊರಬಿದ್ದಿದೆ.

ನ್ಯಾಯಾಲಯವು ಅರ್ಹ ಪ್ರಕರಣಗಳಲ್ಲಿ ಜಾಮೀನು ನಿರಾಕರಿಸಲು ಆರಂಭಿಸಿದರೆ ಅದು ಸಂವಿಧಾನದ ವಿಧಿ ೨೧ರಡಿ ಖಾತರಿಪಡಿಸಲಾಗಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಅಭಯ ಎಸ್.ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ಹೇಳಿತು.

 

ಪ್ರಾಸಿಕ್ಯೂಷನ್ ಆರೋಪಗಳು ಅತ್ಯಂತ ಗಂಭೀರವಾಗಿರಬಹುದು,ಆದರೆ ಕಾನೂನಿಗೆ ಅನುಗುಣವಾಗಿ ಜಾಮೀನಿಗೆ ಪ್ರಕರಣವನ್ನು ಪರಿಗಣಿಸುವುದು ನ್ಯಾಯಾಲಯಗಳ ಕರ್ತವ್ಯವಾಗಿದೆ. ಜಾಮೀನು ನಿಯಮ ಜೈಲು ಅಪವಾದ ಎನ್ನುವುದು ವಿಶೇಷ ಕಾನೂನುಗಳಿಗೂ ಅನ್ವಯಿಸುತ್ತದೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು ಆರೋಪಿ ಜಲಾಲುದ್ದೀನ್ ಖಾನ್‌ನನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿತು.

ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ ಸದಸ್ಯರಿಗೆ ತನ್ನ ಮನೆಯ ಮಹಡಿಯನ್ನು ಬಾಡಿಗೆಗೆ ನೀಡಿದ್ದಕ್ಕಾಗಿ ಖಾನ್ ವಿರುದ್ಧ ಯುಎಪಿಎ ಮತ್ತು ಈಗ ನಿಷ್ಕ್ರಿಯಗೊಂಡಿರುವ ಐಪಿಸಿಯಡಿ ಪ್ರಕರಣ ದಾಖಲಾಗಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version