8:57 AM Tuesday 16 - December 2025

ಟ್ಯಾಂಕ್ ಮೇಲೇರಿ ಪ್ರತಿಭಟಿಸಿದ ಅತ್ಯಾಚಾರ ಸಂತ್ರಸ್ತೆ!

tank
13/02/2024

ರಾಜಸ್ಥಾನ: ಅತ್ಯಾಚಾರದ ನಡೆದ ಬಗ್ಗೆ ದೂರು ನೀಡಿ ಒಂದು ತಿಂಗಳು ಕಳೆದರೂ ಆರೋಪಿಯನ್ನು ಪೊಲೀಸರು ಬಂಧಿಸದ ಹಿನ್ನೆಲೆಯಲ್ಲಿ ನೊಂದ ಅತ್ಯಾಚಾರ ಸಂತ್ರಸ್ತೆ ನೀರಿನ ಟ್ಯಾಂಕ್ ಹತ್ತಿ ಪ್ರತಿಭಟಿಸಿರುವ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದಿದೆ.

ಘಟನೆ ನಡೆದು ಒಂದು ತಿಂಗಳಾದರೂ ಅತ್ಯಾಚಾರಿ ಆರೋಪಿಯನ್ನು ಪೊಲೀಸರು ಏಕೆ ಇನ್ನೂ ಬಂಧಿಸಿಲ್ಲ? ಈ ಕೂಡಲೇ ಆತನನ್ನು ಬಂಧಿಸುವಂತೆ ಸಂತ್ರಸ್ತೆ ಆಕ್ರೋಶ ವ್ಯಕ್ತಪಡಿಸಿದರು.

ಆರೋಪಿ ವಿರುದ್ಧ ತಿಂಗಳ ಹಿಂದೆಯೇ ಸಂತ್ರಸ್ತೆ ದೂರು ನೀಡಿದ್ದರು. ಆಕೆಯ ದೂರಿನ ಆಧಾರದ ಮೇಲೆ, ಐಪಿಸಿಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಮ್ಯಾಜಿಸ್ಟ್ರೇಟ್ ಗೆ ತನ್ನ ಹೇಳಿಕೆಯನ್ನು ಸಹ ದಾಖಲಿಸಲಾಗಿತ್ತದರೂ, ಇಲ್ಲಿಯವರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ ಎನ್ನಲಾಗಿದೆ.

ಇದೇ ಕಾರಣಕ್ಕೆ ಸಂತ್ರಸ್ತೆ ವಾಟರ್ ಟ್ಯಾಂಕ್ ಹತ್ತಿ ಪ್ರತಿಭಟಿಸಿದ್ದು, ಸುಮಾರು 3 ಗಂಟೆಗಳ ಕಾಲ ಟ್ಯಾಂಕ್ ನಿಂದ ಇಳಿಯದೇ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನೆಯ ಮಾಹಿತಿ ತಿಳಿದು ಸದರ್ ಪೊಲೀಸ್ ಠಾಣಾಧಿಕಾರಿ ಗೌರವ್ ಪ್ರಧಾನ್ ಸ್ಥಳಕ್ಕೆ ಆಗಮಿಸಿ ಮನವೊಲಿಸಲು ಯತ್ನಿಸಿದರು. ಬಳಿಕ ಆಕೆಯನ್ನು ಕೆಳಗಿಳಿಸಲಾಗಿದೆ.

ಇನ್ನೂ ಸದ್ಯದಲ್ಲೇ ಆರೋಪಿಯನ್ನು ಬಂಧಿಸುವುದಾಗಿ ಇದೇ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ಲಾಲ್ ಮೀನಾ ಸಂತ್ರಸ್ತೆಗೆ ಭರವಸೆ ನೀಡಿದರು.

ಇತ್ತೀಚಿನ ಸುದ್ದಿ

Exit mobile version