ರೀಲ್ಸ್‌ ಮಾಡುತ್ತಿದ್ದ ಮಹಿಳೆಯ ಚಿನ್ನದ ಸರ ಕದ್ದು ಪರಾರಿಯಾದ ಕಳ್ಳ!

reels
25/03/2024

ಕಾಲಕ್ಕೆ ತಕ್ಕ ಹಾಗೆ ಜನರೂ ಬದಲಾಗ್ತಿದ್ದಾರೆ. ಇತ್ತೀಚೆಗೆ ಜನರು ರೀಲ್ಸ್‌ ಗಳಲ್ಲಿ ಹೆಚ್ಚು ಆಸಕ್ತ ತೋರಿಸುತ್ತಿದ್ದಾರೆ. ರೀಲ್ಸ್‌ ನ ಅತೀಯಾದ ಹುಚ್ಚಾಟಕ್ಕೆ ಬಿದ್ದು ಸಾಕಷ್ಟು ಜನರು ಪ್ರಾಣ ಕಳೆದುಕೊಳ್ಳುವಂತಹ ಸನ್ನಿವೇಶವನ್ನು ಎದುರಿಸಿದ್ದಾರೆ. ಇದೇ ಸಂದರ್ಭದಲ್ಲಿ ಇದೀಗ ರೀಲ್ಸ್‌ ಮಾಡುತ್ತಿದ್ದ ಮಹಿಳೆಯೊಬ್ಬರು ತನ್ನ ಚಿನ್ನದ ಸರವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.

ಈ ಘಟನೆ ಗಾಜಿಯಾಬಾದ್‌ ನ ಇಂದಿರಾಪುರಂನಲ್ಲಿ ನಡೆದಿದೆ. ಸುಷ್ಮಾ ಎಂಬ ಮಹಿಳೆ ರಸ್ತೆಯಲ್ಲಿ ರೀಲ್ಸ್‌ ಮಾಡುತ್ತಿದ್ದರು. ಕ್ಯಾಟ್‌ ವಾಕ್‌ ಮಾಡುತ್ತಾ, ಬರುತ್ತಿದ್ದ ವೇಳೆ ಇತ್ತ ಬೈಕ್‌ ಸವಾರನೊಬ್ಬ ಹೆಲ್ಮೆಟ್‌ ಧರಿಸಿ ಬೈಕ್‌ ಚಲಾಯಿಸುತ್ತಾ ಮಹಿಳೆಯ ಕುತ್ತಿಗೆಯಲ್ಲಿದ್ದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಬೈಕ್‌ ಸವಾರ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿರುವ ದೃಶ್ಯ ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಸರ ಕಳವಾಗಿರುವ ಬಗ್ಗೆ ಸುಷ್ಮಾ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜನರು ತಮ್ಮ ಸಂತೋಷಕ್ಕೆ ರೀಲ್ಸ್‌ ಮಾಡಿದರೆ ತಪ್ಪಿಲ್ಲ, ಆದ್ರೆ, ಮೈಮೇಲಿನ ಪ್ರಜ್ಞೆ ಕಳೆದುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್‌ ಮಾಡಿದರೆ, ಇಂತಹ ಅನಾಹುತಗಳು ನಡೆಯುತ್ತವೇ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version