5:56 PM Thursday 11 - December 2025

ರಕ್ಷಕ್ ಬುಲೆಟ್ ಹೀರೋ ಆಗಿ ನಟಿಸುತ್ತಿರುವ ಮೊದಲ ಚಿತ್ರ ಇದೇ ನೋಡಿ

rakshak bulet
03/04/2024

ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಪುತ್ರ, ಇತ್ತೀಚೆಗೆ ಬಿಡುಗಡೆಯಾಗಿದ್ದ ಗುರುಶಿಷ್ಯರು ಚಿತ್ರದಲ್ಲಿ ನಟಿಸಿದ್ದ ಬುಲೆಟ್ ರಕ್ಷಕ್ ಇದೀಗ ಹೊಸ ಸಿನಿಮಾವೊಂದನ್ನು ಘೋಷಿಸಿದ್ದು, ಮೊದಲ ಬಾರಿಗೆ ಹೀರೋ ಆಗಿ ಚಿತ್ರವೊಂದರಲ್ಲಿ ನಟಿಸಲು ಮುಂದಾಗಿದ್ದಾರೆ.

‘RB 01’ ಎಂಬ ಟೈಟಲ್ ಈ ಹೊಸ ಸಿನಿಮಾಕ್ಕೆ ಸದ್ಯ ಇಡಲಾಗಿದೆ. ಶೀಘ್ರವೇ ಸಿನಿಮಾದ ಟೈಟಲ್ ಹಾಗೂ ಟೀಸರ್ ಅನಾವರಣ ಮಾಡುವುದಾಗಿ ರಕ್ಷಕ್ ಘೋಷಣೆ ಮಾಡಿಕೊಂಡಿದ್ದಾರೆ.

ಟೈಟಲ್ ನಲ್ಲಿ ಲಾಂಗ್ ವೊಂದನ್ನು ತೋರಿಸಲಾಗಿದೆ. ಹಾಗಾಗಿ ರೌಡಿಸಂನ ಕಥೆ ಇರುವ ಸಿನಿಮಾ ಇದಾಗಿದೆ ಎಂದು ಹೇಳಲಾಗಿದೆ. ಜೊತೆಗೆ ಗಣೇಶ ವಿಸರ್ಜನೆಯ ದೃಶ್ಯವನ್ನೂ ತೋರಿಸಲಾಗಿದೆ. ‘ಮಚ್ಚಾ ಏರಿಯಾದಲ್ಲಿ ಕಣ್ಮುಂದೆ ಬೇಜ್ಜಾನ್ ಗಾಡಿಗಳು ಸೌಂಡು ಮಾಡುತ್ತವೆ. ಆದರೆ ಸೌಂಡ್ ಕೇಳ್ತಿದ್ದ ಹಾಗೆ  ಇದೇ ಗಾಡಿ ಅಂತ ಹೇಳೋಕೆ ಆಗೋದು ಒಂದನ್ನೇ…  ಅದುವೇ ಬುಲೆಟ್. ಇನ್ಮುಂದೆ ನಂದೆ ರೌಂಡು, ನಂದೇ ಸೌಂಡು ಎಂದು ಬರೆಯಲಾಗಿದೆ.

ಎಲ್ಲಾ ‌ನನ್ನ‌ ಆತ್ಮೀಯರೆ , ಇಂದು‌ ನನ್ನ ಪೂಜ್ಯ ತಂದೆ ದಿವಂಗತ “ಬುಲೆಟ್ ಪ್ರಕಾಶ್” ರವರ 47ನೇ ಜನ್ಮದಿನ. ಇಂದಿನ ವಿಶೇಷವೇನೆಂದರೆ, ನಾನು ನಾಯಕ ನಟನಾಗಿ ನಟಿಸುತ್ತಿರುವ, ನನ್ನ ಚೊಚ್ಚಲ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ನನಗೆ ಸಂತಸ ತಂದಿದೆ. ನನ್ನ ತಂದೆಯ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಆಶೀರ್ವಾದ ಕೂಡ ಸದಾ ನನ್ನ ಮೇಲಿರಲಿ ಎಂದು ಬಯಸುತ್ತೇನೆ. ನನಗೂ ಹಾಗೂ ನನ್ನ ಇಡೀ ಚಿತ್ರತಂಡಕ್ಕು ಹರಸಿ ಹಾರೈಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ  ಎಂದು ಪೋಸ್ಟರ್ ವೊಂದನ್ನು ರಕ್ಷಕ್ ಪೋಸ್ಟ್ ಮಾಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version