2:27 PM Saturday 24 - January 2026

ಬೈಕ್ ಡಿಕ್ಕಿ ಮೂವರಿಗೆ ಗಾಯ | ವಿಷ ಸೇವಿಸಿದ ವ್ಯಕ್ತಿ ಸಾವು | ಅಪರಿಚಿತ ವ್ಯಕ್ತಿ ಸಾವು

crime
10/04/2025

ಬೈಕ್ ಡಿಕ್ಕಿ: ಪಾದಚಾರಿ ಸಹಿತ ಮೂವರಿಗೆ ಗಾಯ

ಕುಂದಾಪುರ:  ಅಂಕದಕಟ್ಟೆ ಜಿಯೋ  ಕೋಟೇಶ್ವರ ಗ್ರಾಮದ ಪೆಟ್ರೋಲ್ ಬಂಕ್ ಎದುರಿನ ಸರ್ವಿಸ್ ರಸ್ತೆಯಲ್ಲಿ ಪಾದಚಾರಿ  ಶ್ರೀನಿವಾಸ್ ಅವರಿಗೆ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಅವರು, ಬೈಕ್ ಸವಾರ, ಸಹಸವಾರ  ಅಮಿತ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಣಿಪಾಲ  ಆಸ್ಪತ್ರೆಗೆ  ದಾಖಲಿಸಲಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವಿಷ ಸೇವಿಸಿದ ವ್ಯಕ್ತಿ ಸಾವು

ಸುಳ್ಯ: ಕಲ್ಮಕಾರು ಗ್ರಾಮದ ತಿರುಮಲೇಶ್ವರ ದಬ್ಬಡ್ಕ (52) ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ  ಘಟನೆ ಎ. 10ರಂದು  ಸಂಭವಿಸಿದೆ.

ಎರಡು ದಿನಗಳ ಹಿಂದೆ ಕೃಷಿಗಾಗಿ ತಂದಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ತಿರುಮಲೇಶ್ವರ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.


ಅಪರಿಚಿತ ವ್ಯಕ್ತಿ ಸಾವು:

ಮಂಗಳೂರು: ಕದ್ರಿ ದೇವಸ್ಥಾನ ರಸ್ತೆಯ ಕದ್ರಿ ಮಾರ್ಟ್ ಬಳಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಅವರನ್ನು ಪರೀಕ್ಷಿಸಿದ ವೈದ್ಯರು, ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಮೃತ ವ್ಯಕ್ತಿ ಸುಮಾರು 45–50 ವರ್ಷ ಪ್ರಾಯದವರಾಗಿದ್ದು, 5.7 ಅಡಿ ಎತ್ತರ, ಗೋಧಿ ಮೈಬಣ್ಣವಿದೆ. ಎಡ ಕೈಯಲ್ಲಿ ಉಪೇಂದ್ರ, ಬಲ ಎದೆಯಲ್ಲಿ ಉಮೇಶ್ ಹಾಗೂ ಎಡ ಎದೆಯ ಮೇಲೆ ರಮೇಶ್ ಎನ್ನುವ ಹೆಸರಿನ ಹಚ್ಚೆ ಹಾಕಲಾಗಿದೆ. ಆಕಾಶ ನೀಲಿ ಬಣ್ಣದ ತುಂಬು ತೋಳಿನ ಅಂಗಿ, ಸೊಂಟದಲ್ಲಿ ಕೇಸರಿ ಬಣ್ಣದ ಕೇಸರಿ ಶಾಲು ಸುತ್ತಿಕೊಳ್ಳಲಾಗಿದೆ. ಈ ಚಹರೆಯ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಕದ್ರಿ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version