11:05 AM Thursday 23 - October 2025

ಫೇಸ್ ಬುಕ್  ಲವ್: ತೃತೀಯ ಲಿಂಗಿಯನ್ನು ವಿವಾಹವಾದ | ಆ ಮೇಲೆ ನಡೆದದ್ದೇನು ಗೊತ್ತಾ?

20/02/2021

ಹೈದರಾಬಾದ್: ಫೇಸ್ ಬುಕ್ ನಲ್ಲಿ ಹುಟ್ಟಿದ ಪ್ರೀತಿ ಇದೀಗ ಹಲವು ತಿರುವುಗಳನ್ನು ಪಡೆದುಕೊಂಡ ಘಟನೆ ನಡೆದಿದೆ. ಏಳೂರು ಮೂಲದ ತಾರಕ್ ಅಲಿಯಾಸ್ ಪಾಂಡುಗೆ ಫೇಸ್ ಬುಕ್ ನಲ್ಲಿ ಭೂಮಿ ಎಂಬ ಹೆಸರಿನ ಯುವತಿಯ ಜೊತೆಗೆ ಪ್ರೀತಿ ಆರಂಭವಾಗಿದೆ. ಎಲ್ಲವೂ ಸರಿಯಾಗಿತ್ತು ಎನ್ನುವಷ್ಟರಲ್ಲಿ ತಾರಕ್ ಗೆ ಒಂದು ಸತ್ಯ ತಿಳಿದು ಹೋಗಿದೆ.

ಫೇಸ್ ಬುಕ್ ನಲ್ಲಿ ತನ್ನ ಜೊತೆಗೆ ಚಾಟ್ ಮಾಡುತ್ತಿದ್ದವಳು ಹುಡುಗಿಯೇ ಅಲ್ಲ, ಆಕೆ ತೃತೀಯ ಲಿಂಗಿ ಎಂದು. ಆದರೆ ಇದು ದೊಡ್ಡ ಘರ್ಷಣೆಯನ್ನು ಸೃಷ್ಟಿಸಲಿಲ್ಲ. ಇವರ ನಡುವೆ ಇದ್ದ ಪ್ರೀತಿ ಇವರನ್ನು ಬೇರ್ಪಡಿಸಲಿಲ್ಲ.

2020ರ ಜನವರಿಯಲ್ಲಿ ಹಿರಿಯ ಒಪ್ಪಿಗೆ ಪಡೆದು ತಾರಕ್ ಮತ್ತು ಭೂಮಿ ವಿವಾಹವಾಗಿದ್ದಾರೆ. ಒಂದು ವರ್ಷ ಇಬ್ಬರು ಕೂಡ ಬಹಳ ಚೆನ್ನಾಗಿ ಜೀವನ ನಡೆಸಿದ್ದಾರೆ. ಆದರೆ ಈ ನಡುವೆ ಇಬ್ಬರ ನಡುವೆಯೂ ಬಿಡಕು ಸೃಷ್ಟಿಯಾಗಿದೆ. ಪತಿ ತಾರಕ್ ತನಗೆ ಆಕೆ ಬೇಡ ಎಂದು ಹೇಳುತ್ತಿದ್ದಾನೆ.

ಈ ನಡುವೆ ಕುಟುಂಬಸ್ಥರು ಇವರನ್ನು ಒಂದು ಮಾಡಿದ್ದರೂ ಸಹ ಇಬ್ಬರ ನಡುವೆ ಹೊಂದಾಣಿಕೆಯಾಗುತ್ತಿಲ್ಲ. ಈ ನಡುವೆ ನೊಂದ ಭೂಮಿ ಹೈದರಾಬಾದ್ ನ ಎಲ್ ಬಿ ನಗರದ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version