10:18 PM Tuesday 28 - October 2025

ಅರಣ್ಯ ಅಧಿಕಾರಿ ಅರೆಸ್ಟ್: ಹುಲಿ ಉಗುರು ಕೇಸ್ ನಲ್ಲಿ ಅಮಾನತ್ತಾಗಿದ್ದ ಅರಣ್ಯ ಅಧಿಕಾರಿ

chikkamagaluru
27/10/2023

ಚಿಕ್ಕಮಗಳೂರು:  ಹುಲಿ ಉಗುರು ಕೇಸ್ ನಲ್ಲಿ ಅಮಾನತ್ತಾಗಿದ್ದ ಅರಣ್ಯ ಅಧಿಕಾರಿ ದರ್ಶನ್ ಅವರನ್ನು ಎನ್.ಆರ್.ಪುರದಲ್ಲಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಹುಲಿ ಉಗುರು ಕೇಸ್ ನಲ್ಲಿ ಸಿಕ್ಕಿಕೊಂಡಿದ್ದ ಡಿ.ಆರ್.ಎಫ್.ಓ. ದರ್ಶನ್ ಅರಣ್ಯಾಧಿಕಾರಿಗಳ ವಿಚಾರಣೆಗೆ ಆಗಮಿಸದ ಹಿನ್ನೆಲೆಯಲ್ಲಿ ಕೊಪ್ಪ ಡಿ.ಎಫ್.ಓ. ದಿನೇಶ್ ಅವರು ಅಮಾನತುಗೊಳಿಸಿ ಆದೇಶಿಸಿದ್ದರು. ಇದರ ಬೆನ್ನಲ್ಲೇ ಇದೀಗ ಅಮಾನತಾದ ಅಧಿಕಾರಿಯನ್ನು ಅರೆಸ್ಟ್ ಮಾಡಲಾಗಿದೆ.

ದರ್ಶನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರಿತ್, ಅಬ್ದುಲ್ ಎಂಬವರು ಲಿಖಿತ ದೂರು ನೀಡಿದ್ದರು. ಈ ಬಗ್ಗೆ ವಿಚಾರಣೆಗೆ ಸೂಚನೆ ನೀಡಿದರೂ ದರ್ಶನ್ ಹಾಜರಾಗದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ದರ್ಶನ್ ರನ್ನ ಕೊಪ್ಪ ಡಿ.ಎಫ್.ಓ ಅಮಾನತು ಮಾಡಿದ್ದರು.

ಇತ್ತೀಚಿನ ಸುದ್ದಿ

Exit mobile version