4:43 PM Wednesday 20 - August 2025

ಟಿಪ್ಪು ದೇಶದ್ರೋಹಿ ಅಲ್ಲ, ರಾಜ್ಯ ಉಳಿಸಲು ಹೋರಾಡಿದ ವೀರ: ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸು

tipu sultan
09/10/2022

ಮೈಸೂರು:  ಟಿಪ್ಪು ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದ ರೈಲಿನ ಹೆಸರು ತೆಗೆದು ಒಡೆಯರ್ ಹೆಸರಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸು ಪ್ರತಿಕ್ರಿಯೆ ನೀಡಿದ್ದಾರೆ.

ಮಾದರಿ ಮೈಸೂರು ನಿರ್ಮಾಣಕ್ಕೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್  ಅವರ ಹೆಸರನ್ನು  ನಿರ್ದಿಷ್ಟವಾಗಿ ಇಡಬೇಕಿತ್ತು. ಆದರೆ, ಒಡೆಯರ್ ಎಂದು ಮಾತ್ರವೇ ಹೆಸರಿಡಲಾಗಿದೆ. ಒಡೆಯರ್ ಅಂದ್ರೆ, ಹತ್ತಾರು ಮನೆತನಗಳು ಕುಟುಂಬಗಳಿವೆ ಎಂದು ಅವರು ಹೇಳಿದ್ದಾರೆ.

ಮೈಸೂರು ಒಡೆಯರ ಹೆಸರಿನಲ್ಲಿ ಬೇರೊಂದು ರೈಲನ್ನು ಆರಂಭಿಸಬಹುದಿತ್ತು. ಆದರೆ ಈಗಿದ್ದ ಹೆಸರನ್ನು ಬದಲಿಸುವುದು ಸರಿಯಲ್ಲ. ಟಿಪ್ಪು ದೇಶದ್ರೋಹಿ ಅಲ್ಲ, ತನ್ನ ರಾಜ್ಯ ಉಳಿಸಿಕೊಳ್ಳಲು ಹೋರಾಡಿದ ವೀರ ಎಂದರು.

ಮಹಮ್ಮದೀಯರ ಎಲ್ಲ ಹೆಸರುಗಳನ್ನು ಇಲ್ಲವಾಗಿಸಲು ತಾಜ್ ಮಹಲ್, ಕೆಂಪುಕೋಟೆ, ಗೋಲ್ ಗುಮ್ಮಟ ಯಾವುದೂ ಉಳಿಯದು. ಸಂವಿಧಾನದಲ್ಲಿ “ವೀ ದ ಪೀಪಲ್ ಆಫ್ ಇಂಡಿಯಾ” ಅಂತ ಇದೆಯೇ ವಿನಃ ವೀ ದ ಹಿಂದೂ ಪೀಪಲ್ ಅಂತ ಇಲ್ಲ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version