12:15 PM Friday 12 - September 2025

ಬೊಮ್ಮಾಯಿಗೆ ಚೆಡ್ಡಿ ಬಿಚ್ಚುಸ್ತೀವಿ: ಎಸ್ ಡಿಪಿಐ ಮುಖಂಡನ ಹೇಳಿಕೆಗೆ ಸಿ.ಟಿ. ರವಿ ಪ್ರತಿಕ್ರಿಯೆ

c t ravi
28/03/2023

ಚಿಕ್ಕಮಗಳೂರು:  ಹಕ್ಕನ್ನ ವಾಪಸ್ ಕೊಡದಿದ್ರೆ ಸಿಎಂ ಬೊಮ್ಮಾಯಿಗೆ ಚೆಡ್ಡಿ ಬಿಚ್ಚುಸ್ತೀವಿ ಎಂದು ಚಿತ್ರದುರ್ಗ ಎಸ್.ಡಿ.ಪಿ.ಐ. ಮುಖಂಡನ ಹೇಳಿಕೆಗೆ ಸಿ.ಟಿ.ರವಿ ಕಿಡಿಕಾರಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಅದೇನು ಹೋಗುತ್ತೋ… ತಲೆ ತಗೀತಿಯೋ… ನಿನ್ನ ತಾಖತ್ತು ತೋರ್ಸು, ನಿಮ್ಮ ತಾಕತ್ ತೋರಿಸಿ ಆಮೇಲೆ ನಾವು ಅದಕ್ಲೆ ಏನ್ ಉತ್ತರ ಕೋಡ್ಬೇಕು ಕೊಡುತ್ತೇವೆ. ಅವರಿಗೆ ಹೇಳಲು ಬಯಸುತ್ತೇನೆ, ಇದು1947 ರ ಭಾರತವಲ್ಲ, ನೀವು ಮಾಡಿದ್ದೇಲ್ಲ ಸಹಿಸಿಕೊಂಡು ಬಿರಿಯಾನಿ ಹಾಕುವ ಭಾರತವು ಅಲ್ಲ, ನಿಮ್ಮ ಮೇಲಿನ ಕೇಸ್ ಗಳನ್ನ ಹಿಂಪಡೆದು ಮೆರೆಯಲು ಅವಕಾಶ ನೀಡುವ ಸರ್ಕಾರವೂ ಈಗಿಲ್ಲ, ಈಗ ಇರುವ ಸರ್ಕಾರ ಬಾಲ‌ ಉದ್ದ ಮಾಡಿದ್ರೆ ಕಟ್ ಮಾಡುವುದು ಹೇಗೆಂದು ಗೊತ್ತಿರುವ ಸರ್ಕಾರ, ಬಾಂಬ್ ಹಾಕುವವರ ತಲೆ ಮೇಲೆಯೇ ಬಾಂಬ್ ಹಾಕುವ ತಾಕತ್ತಿರುವ ಸರ್ಕಾರ, ಭಯೋತ್ಪಾದನೆ ಮಾಡುವವರಿಗೆ ಸರ್ಜಿಕಲ್ ಸ್ಟೈಕ್ ಮಾಡಿ ತಲೆ ಎತ್ತದಂತೆ ಮಾಡುವ ತಾಕತ್ತಿನ‌ ಸರ್ಕಾರ ಎಂದು ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

ನಿಮ್ಮ ಎಸ್.ಡಿ.ಪಿ.ಐ.‌ಹುಟ್ಟಿದ್ದೇ ಕೇರಳದಲ್ಲಿ, ಅಲ್ಲಿಯೇ ಮೀಸಲಾತಿ‌ ಇಲ್ಲ,  ಕೋಮು ಆಧಾರಿತ, ಮತ ಆಧಾರಿತ ಮೀಸಲಾತಿ ಕೇರಳದಲ್ಲೇ ಇಲ್ಲ,  ಆಂಧ್ರದಲ್ಲಿ ಕೊಟ್ಟಿದ್ರು, ಸಂವಿಧಾನ ಬಾಹಿರ ಎಂದು 7 ಜನರ ಲಾರ್ಜರ್ ಬೆಂಚ್ ಕ್ಯಾನ್ಸಲ್ ಮಾಡ್ತು, ಕರ್ನಾಟಕದಲ್ಲಿ ಸಂವಿಧಾನ ಬಾಹಿರ ಮೀಸಲಾತಿ ಯಾರಿಗೂ ಕೊಡುವುದಿಲ್ಲ‌. ಸಂವಿಧಾನ ಬಾಹಿರವಾಗಿರುವರ ಸಮರ್ಥನೆಗೆ ಯಾರು ನಿಲ್ಲುತ್ತಾರೋ ಅವರು ನಿಲ್ಲಲಿ, ಧಮ್ಕಿ ಹಾಕುವ ತಾಲಿಬಾನ್ ಮಾದರಿ  ಇಲ್ಲ ನಡೆಯಲ್ಲ, ಆ ಸರ್ಕಾರ ಈಗಿಲ್ಲ, ತಾಲಿಬಾನ್ ಆಡಳಿತವಿರುವ ರಾಜ್ಯ ಎಂದು ಭಾವಿಸಿದ್ರೆ ಇದು ತಾಲಿಬಾನ್ ಆಡಳಿತದ ರಾಜ್ಯ ಅಲ್ಲ ಎಂದು ಸಿ.ಟಿ.ರವಿ ಉತ್ತರಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version