ಮಂಗಳೂರಿನಲ್ಲಿ ಇಬ್ಬರು ‘ಅನೈತಿಕ ಪೊಲೀಸರ’ ಬಂಧನ!

unethical police
22/07/2023

ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿ ಅನೈತಿಕ ಪೊಲೀಸ್ ಗಿರಿ ನಡೆಸಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ದೀಕ್ಷಿತ್ ಮತ್ತು ಲಾಯ್ಡ್ ಪಿಂಟೋ  ಎಂದು ಗುರುತಿಸಲಾಗಿದೆ. ಮಂಗಳೂರಿನ  ಬ್ಯಾಚುಲರ್ ಆಫ್ ಹಾಸ್ಪಿಟಲ್ ಆ್ಯಡ್ಮೀಸ್ಟ್ರೇಷನ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು  ತಮ್ಮ  ಸ್ನೇಹಿತರೊಂದಿಗೆ  ಪಣಂಬೂರು  ಬೀಚ್ ಗೆ ಹೋಗಿ  ವಾಪಾಸ್ಸು  ಬರುವಾಗ ಅವರನ್ನು  ಹಿಂಬಾಲಿಸಿಕೊಂಡು  ಬಂದು   ಬಿಜೈ ಕಾಪಿಕಾಡ್ ನ 7 ನೇ ಕ್ರಾಸ್ ನಲ್ಲಿ  ವಿದ್ಯಾರ್ಥಿಗಳನ್ನು ತಡೆದು  ಅವಾಚ್ಯ  ಶಬ್ದಗಳಿಂದ  ಬೈದು  ಹಲ್ಲೆ  ನಡೆಸಲಾಗಿತ್ತು.

ಈ ಘಟನೆಗೆ  ಸಂಬಂಧಿಸಿದಂತೆ ಉರ್ವ ಪೊಲೀಸ್  ಠಾಣೆಯಲ್ಲಿ  ಪ್ರಕರಣ  ದಾಖಲಾಗಿತ್ತು. ಆರೋಪಿಗಗಳನ್ನು  ದಸ್ತಗಿರಿ  ಮಾಡಿ ಕೃತ್ಯಕ್ಕೆ ಬಳಸಿದ ಸ್ಕೂಟರ್  ಮತ್ತು  ಮೊಬೈಲ್  ಗಳನ್ನು ಸ್ವಾಧೀನಪಡಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.  ಪ್ರಕರಣದ  ತನಿಖೆ  ಮುಂದುವರೆಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿhttps://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿhttps://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿhttps://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version