ಮಣಿಪುರದಲ್ಲಿ ಭದ್ರತಾ ಪಡೆ ಮತ್ತು ಗುಂಪಿನ ನಡುವೆ ಘರ್ಷಣೆ: ಬಿಜೆಪಿ ನಾಯಕರೇ ಟಾರ್ಗೆಟ್..!

ಇಂಫಾಲ್ ಪಟ್ಟಣದಲ್ಲಿ ರಾತ್ರಿಯಿಡೀ ಭದ್ರತಾ ಪಡೆಗಳೊಂದಿಗೆ ಒಂದು ಗುಂಪೊಂದು ಘರ್ಷಣೆ ನಡೆಸಿದ್ದರಿಂದ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ.
ಇದೇ ವೇಳೆ ಬಿಜೆಪಿ ನಾಯಕರ ಮನೆಗಳಿಗೆ ಬೆಂಕಿ ಹಚ್ಚುವ ಪ್ರಯತ್ನಗಳು ನಡೆದಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಇನ್ನು ಪ್ರತ್ಯೇಕ ಘಟನೆಗಳಲ್ಲಿ, ಮಣಿಪುರದ ಬಿಷ್ಣುಪುರ್ ಜಿಲ್ಲೆಯ ಕ್ವಾಕ್ಟಾ ಮತ್ತು ಚುರಾಚಂದ್ಪುರ ಜಿಲ್ಲೆಯ ರಾತ್ರಿಯಿಡೀ ಸ್ವಯಂಚಾಲಿತ ಗುಂಡಿನ ದಾಳಿ ನಡೆದಿದೆ.
ಪಶ್ಚಿಮ ಇಂಫಾಲ್ ನ ಇರಿಂಗಬಾಮ್ ಪೊಲೀಸ್ ಠಾಣೆಯಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡುವ ಪ್ರಯತ್ನವೂ ನಡೆದಿತ್ತು.
ಆದಾಗ್ಯೂ, ಯಾವುದೇ ಶಸ್ತ್ರಾಸ್ತ್ರಗಳನ್ನು ಕದಿಯಲಾಗಿಲ್ಲ. ದಂಗೆಕೋರರು ಒಟ್ಟುಗೂಡುವುದನ್ನು ತಡೆಯಲು ಸೇನೆ, ಅಸ್ಸಾಂ ರೈಫಲ್ಸ್ ಮತ್ತು ಮಣಿಪುರ ಕ್ಷಿಪ್ರ ಕ್ರಿಯಾ ಪಡೆ ರಾಜ್ಯ ರಾಜಧಾನಿಯ ಮೂಲಕ ಮಧ್ಯರಾತ್ರಿಯವರೆಗೆ ಜಂಟಿ ಕಾರ್ಯಾಚರಣೆ ನಡೆಸಿದವು. ಸುಮಾರು 1,000 ಜನರ ಗುಂಪು ಸೇರಿ ಅರಮನೆ ಕಾಂಪೌಂಡ್ ಬಳಿಯ ಕಟ್ಟಡಗಳನ್ನು ಸುಟ್ಟುಹಾಕಲು ಪ್ರಯತ್ನಿಸಿತು.
ಜನಸಮೂಹವನ್ನು ಚದುರಿಸಲು ಆರ್ ಎಎಫ್ ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿತು. ಮತ್ತೊಂದು ಗುಂಪು ಶಾಸಕ ಬಿಸ್ವಜೀತ್ ಅವರ ಮನೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿತು. ಆದಾಗ್ಯೂ, ಆರ್ ಎಎಫ್ ತುಕಡಿ ಜನಸಮೂಹವನ್ನು ಚದುರಿಸಿತು. ಮತ್ತೊಂದು ಗುಂಪು ಸಿಂಜೆಮೈ ಎಂಬಲ್ಲಿ ಮಧ್ಯರಾತ್ರಿಯ ನಂತರ ಬಿಜೆಪಿ ಕಚೇರಿಯನ್ನು ಸುತ್ತುವರೆಯಿತು.
ಆದರೆ ಸೇನಾ ತುಕಡಿ ಅದನ್ನು ಚದುರಿಸಿದ್ದರಿಂದ ಯಾವುದೇ ಹಾನಿ ಮಾಡಲು ಸಾಧ್ಯವಾಗಲಿಲ್ಲ. ಅಂತೆಯೇ, ಇಂಫಾಲ್ ನ ಪೊರಂಪೇಟ್ ಬಳಿಯ ಬಿಜೆಪಿ (ಮಹಿಳಾ ವಿಭಾಗ) ಅಧ್ಯಕ್ಷೆ ಶಾರದಾ ದೇವಿ ಅವರ ಮನೆಯನ್ನು ಮಧ್ಯರಾತ್ರಿಯ ಸುಮಾರಿಗೆ ಗುಂಪೊಂದು ಧ್ವಂಸಗೊಳಿಸಲು ಪ್ರಯತ್ನಿಸಿತು. ಭದ್ರತಾ ಪಡೆಗಳು ಯುವಕರನ್ನು ಚದುರಿಸುವಲ್ಲಿ ಯಶಸ್ವಿಯಾದವು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw