12:47 PM Thursday 23 - October 2025

ಬೋಟಿನೊಳಗಿನ ವಿಷ ಗಾಳಿಯ ಪರಿಣಾಮ ಇಬ್ಬರು ಕಾರ್ಮಿಕರು ಅಸ್ವಸ್ಥ

02/09/2023

ಮಲ್ಪೆ: ಬೋಟಿನೊಳಗಿನ ವಿಷ ಗಾಳಿಯ ಪರಿಣಾಮ ಒಡಿಸ್ಸಾ ಮೂಲದ ಇಬ್ಬರು ಕಾರ್ಮಿಕರು ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಶುಕ್ರವಾರ ಸಂಜೆ ಮಲ್ಪೆ ಬಂದರಿನಲ್ಲಿ ನಡೆದಿದೆ.

ಕಾರ್ಮಿಕರನ್ನು ಒರಿಸ್ಸಾದ ಜಯ ಮತ್ತು ರಾಜು ಎಂದು ಗುರುತಿಸಲಾಗಿದೆ.

ಮೀನುಗಾರಿಕೆ ತೆರಳಿದ್ದ ಟ್ರಾಲ್ ಲೈಲ್ಯಾಂಡ್ ಬೋಟ್ ವಾಪಾಸ್ಸು ಮಲ್ಪೆ ಬಂದಿದ್ದು, ಈ ವೇಳೆ ಮೀನು ಖಾಲಿ ಮಾಡಲು ಬೋಟಿನ ಸ್ಟೋರಜ್ ಒಳಗಡೆ ಇಬ್ಬರು ಕಾರ್ಮಿಕರು ಇಳಿದಿದ್ದರು. ಅಲ್ಲಿ ಮೀನಿನಿಂದ ಉತ್ಪತ್ತಿಯಾದ ವಿಷ ಗಾಳಿಯ ಪರಿಣಾಮ ಇವರಿಬ್ಬರು ಉಸಿರಾಟದ ತೊಂದರೆಗೆ ಒಳಗಾಗಿ ಪ್ರಜ್ಞೆ ತಪ್ಪಿ ಬಿದ್ದರೆಂದು ತಿಳಿದುಬಂದಿದೆ.

ತೀವ್ರವಾಗಿ ಅಸ್ವಸ್ಥಗೊಂಡ ಇವರಿಬ್ಬರಿಗೆ ಜೀವ ರಕ್ಷಕ ಈಶ್ವರ ಮಲ್ಪೆ ತಂಡ ಅಲ್ಲೇ ಪ್ರಥಮ ಚಿಕಿತ್ಸೆ ನೀಡಿ, ತಕ್ಷಣ ಆಂಬುಲೆನ್ಸ್ನಲ್ಲಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದೆ. ಇದೀಗ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ

ಇತ್ತೀಚಿನ ಸುದ್ದಿ

Exit mobile version