ಬೀದಿನಾಯಿ ದಾಳಿಗೆ ಬಲಿಯಾದ ಎರಡೂವರೆ ವರ್ಷದ ಬಾಲಕಿ!

ತೆಲಂಗಾಣ: ಬೀದಿ ನಾಯಿಗಳ ದಾಳಿಗೆ ಎರಡೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನ ಗಾಯತ್ರಿ ನಗರದಲ್ಲಿ ನಡೆದಿದೆ.
ಎರಡೂವರೆ ವರ್ಷ ವಯಸ್ಸಿನ ಬಾಲಕಿ ದೀಪಾಲಿ ಬೀದಿ ನಾಯಿಯ ದಾಳಿಗೆ ಬಲಿಯಾದವಳಾಗಿದ್ದಾಳೆ. ಶುಕ್ರವಾರ ಮನೆ ಹೊರಗೆ ಆಟವಾಡುತ್ತಿದ್ದ ದೀಪಾಲಿಯ ಮೇಲೆ ಬೀದಿನಾಯಿಗಳು ದಾಳಿ ಮಾಡಿದ್ದು, ಮಗುವನ್ನು ಕಚ್ಚಿ ಎಳೆದಾಡಿವೆ. ಬಳಿಕ ಮಗುವಿನ ಸಹೋದರಿ ಮೇಲೆಯೂ ದಾಳಿ ನಡೆಸಿವೆ.
ಬೀದಿನಾಯಿಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ದೀಪಾಲಿಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾದರೂ, ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಇನ್ನೂ ಬಾಲಕಿಯ ಸಹೋದರಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಛತ್ತೀಸ್ ಗಢ ಮೂಲದ ಮಗು:
ಸಾವನ್ನಪ್ಪಿದ ಬಾಲಕಿ ದೀಪಾಲಿ ಪೋಷಕರು ಮೂಲತಃ ಛತ್ತೀಸ್ ಗಢಕ್ಕೆ ಸೇರಿದವರಾಗಿದ್ದು, ಕಳೆದ 5 ತಿಂಗಳ ಹಿಂದೆ ಹೈದರಾಬಾದ್ ಗೆ ವಲಸೆ ಬಂದಿದ್ದರು. ಗಾಯತ್ರಿ ನಗರದಲ್ಲಿ ಪುಟ್ಟ ಮನೆಯೊಂದನ್ನು ಬಾಡಿಗೆ ಪಡೆದು ಮಕ್ಕಳೊಂದಿಗೆ ವಾಸವಿದ್ದರು. ಈ ಕುಟುಂಬ ದಿನಕೂಲಿ ಮಾಡುತ್ತಿದ್ದರು. ಈ ಪ್ರದೇಶದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ಎಷ್ಟೇ ದೂರು ನೀಡಿದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ. ಸದ್ಯಕ್ಕೆ ಘಟನೆ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth