ಹಳೆಯ ವಾಹನಗಳಿಗೆ  ಇ20 ಪೆಟ್ರೋಲ್‌ ನಿಂದ ಹಾನಿಯಾಗಬಹುದು: ಕೊನೆಗೂ ಒಪ್ಪಿಕೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

nitin gadkari
30/07/2026

ನವದೆಹಲಿ:  ಇ20 ಪೆಟ್ರೋಲ್ (ಶೇಕಡಾ 20 ರಷ್ಟು ಎಥನಾಲ್ ಮಿಶ್ರಿತ ಪೆಟ್ರೋಲ್) ಬಳಕೆಯಿಂದ ಬಿಎಸ್–3 (BS-3) ಮಾನದಂಡದ ಹಳೆಯ ವಾಹನಗಳ ಕೆಲವು ಬಿಡಿಭಾಗಗಳಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂಬುದನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ರಾಜ್ಯಸಭೆಯಲ್ಲಿ ಈ ವಿಷಯವನ್ನು ತಿಳಿಸಿದ್ದು, 2005 ರ ಏಪ್ರಿಲ್ 1 ರಿಂದ 2016 ರ ನಡುವೆ ತಯಾರಾದ ಬಿಎಸ್–3 ವಾಹನಗಳಲ್ಲಿ ಇ20 ಪೆಟ್ರೋಲ್ ಬಳಸಿದಾಗ ಕೆಲವು ರಬ್ಬರ್ ಭಾಗಗಳು ಮತ್ತು ಎಂಜಿನ್ ಗ್ಯಾಸ್ಕೆಟ್‌ಗಳು ಹಾನಿಗೊಳಗಾಗಬಹುದು ಎಂದು ಹೇಳಿದ್ದಾರೆ.

ಸರಳ ಹಾಗೂ ಕಡಿಮೆ ವೆಚ್ಚದ ರಿಪೇರಿ:

ಬಿಎಸ್–3 ವಾಹನಗಳ ರಬ್ಬರ್ ಭಾಗಗಳು ಅಥವಾ ಗ್ಯಾಸ್ಕೆಟ್‌ಗಳು ಹಾಳಾದರೆ, ಅವುಗಳನ್ನು ವಾಹನದ ಸಾಮಾನ್ಯ ಸರ್ವಿಸಿಂಗ್ (Regular Servicing) ವೇಳೆಯಲ್ಲೇ ಸುಲಭವಾಗಿ ಬದಲಾಯಿಸಬಹುದು. ಇದಕ್ಕೆ ಹೆಚ್ಚಿನ ಆರ್ಥಿಕ ಹೊರೆ ಬೀಳುವುದಿಲ್ಲ ಎಂದು ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL), ಐಐಪಿ ಡೆಹರಾಡೂನ್, ಎಸ್‌ಐಎಎಮ್ (SIAM) ಮತ್ತು ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಜಂಟಿಯಾಗಿ ನಡೆಸಿದ ಅಧ್ಯಯನದ ಪ್ರಕಾರ, ಇ20 ಪೆಟ್ರೋಲ್ ಬಳಸಲು ಎಂಜಿನ್‌ ನಲ್ಲಿ ಯಾವುದೇ ಪ್ರಮುಖ ಮಾರ್ಪಾಡುಗಳನ್ನು ಮಾಡುವ ಅಗತ್ಯವಿಲ್ಲ ಎಂದು ಸಮರ್ಥಿಸಿಕೊಂಡರು.

ಇ20 ಇಂಧನ ಬಳಕೆಯಿಂದ ಚಾಲನೆಯ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರಲ್ಲ. ಇಂಧನ ಮೈಲೇಜ್ ಕೇವಲ ಇಂಧನದ ಮೇಲಷ್ಟೇ ಅಲ್ಲದೆ, ಚಾಲನಾ ಶೈಲಿ ಹಾಗೂ ವಾಹನದ ನಿರ್ವಹಣೆಯ ಮೇಲೆಯೂ ಅವಲಂಬಿತವಾಗಿರುತ್ತದೆ ಎಂದು ಸಚಿವರು ವಿವರಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version