ಯಡಿಯೂರಪ್ಪನವರು ಶೀಘ್ರ ಕೋಪಿಷ್ಠ ಎಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ!

ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಶೀಘ್ರ ಕೋಪಿಷ್ಟ ಆದ್ರೆ ಅದನ್ನು ಬೇಗನೇ ಮರೆತು ಬಿಡುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ವಿಪ್ರ ಸ್ನೇಹ ಬಳಗದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಸಿಟ್ಟು ಜಾಸ್ತಿ, ಶೀಘ್ರ ಕೋಪಿಷ್ಟ ಆದರೆ ಅದನ್ನು ಬೇಗ ಮರೆತುಬಿಡುತ್ತಾರೆ, ದೀರ್ಘ ದ್ವೇಷಿಯಲ್ಲ ಎಂದು ಹೇಳಿದರು.
ಯಡಿಯೂರಪ್ಪ ಅವರು ಬಹಳ ಶ್ರಮಪಟ್ಟು ಬಿಜೆಪಿ ನಾಯಕರಾಗಿದ್ದಾರೆ ಎಂದ ಅವರು, ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರಿಗೆ ವಿಪ್ರ ಸ್ನೇಹ ಬಳಗದಿಂದ ಸನ್ಮಾನ ಕಾರ್ಯಕ್ರಮ ನಡೆಯುತ್ತಿದೆ ಎನ್ನುವ ಕಾರಣಕ್ಕೆ ದೆಹಲಿಯಿಂದ ಬಂದೆ. ಯಡಿಯೂರಪ್ಪ ಬಹಳಷ್ಟು ಪರಿಶ್ರಮ ಪಟ್ಟು, ಪುರಸಭೆ ಅಧ್ಯಕ್ಷರಾಗಿ, ಹಲ್ಲೆಗೊಳಗಾಗಿ ಪುನರ್ಜನ್ಮ ಪಡೆದು ಬಿಜೆಪಿಯ ನಾಯಕರಾಗಿದ್ದಾರೆ ಎಂದು ಜೋಶಿ ಹೇಳಿದರು.
ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಯಡಿಯೂರಪ್ಪ ಅವರು ಸಿಟ್ಟು ಮಾಡಿಕೊಂಡಿದ್ದಾರೆ. ವೈಯಕ್ತಿಕವಾಗಿ ಎಂದಿಗೂ ದ್ವೇಷ ಇಟ್ಟುಕೊಂಡಿಲ್ಲ. ಇದೀಗ ಚುನಾವಣೆ ಬರುತ್ತಿದೆ. ಈ ಹಿಂದೆ ನಾವು ಅಧಿಕಾರ ಕಳೆದುಕೊಂಡಿದ್ದೇವೆ ಮತ್ತು ಅಧಿಕಾರ ಪಡೆದಿದ್ದೇವೆ. ಈ ಬಾರಿ ಮೋದಿಯವರ ಆಶೀರ್ವಾದ, ಮೋದಿ ಜನಪ್ರಿಯತೆ ದೇಶದ ಬದಲಾವಣೆ ದೃಷ್ಟಿಯಿಂದ ರಾಜ್ಯದಲ್ಲಿ 28 ಕ್ಕೆ 28 ಸ್ಥಾನ ಪಡೆಯುತ್ತೇವೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth