ಪತಿ ಮಾಡಿದ್ನಂತೆ ಮೋಸ: ಗಂಡನ ಮೇಲೆ ಕುದಿಯುವ ನೀರು ಎರಚಿದ ಪತ್ನಿ

ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ವಿವಾಹೇತರ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದ ಮೇಲೆ ಪತ್ನಿ ಕುದಿಯುವ ನೀರನ್ನು ಎಸೆದ ಪರಿಣಾಮ ಪತಿ ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.
ಸಂತ್ರಸ್ತನನ್ನು ಆಶಿಶ್ ರಾಯ್ ಎಂದು ಗುರುತಿಸಲಾಗಿದ್ದು, ಪತ್ನಿಯ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಮಾವನಿಂದ ಥಳಿಸಲ್ಪಟ್ಟು ಟೆರೇಸ್ ನಿಂದ ತಳ್ಳಲ್ಪಟ್ಟಿದ್ದಾನೆ.
ಘಟನೆಯ ನಂತರ, ಆಶಿಶ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಆರೈಕೆಗಾಗಿ ನಗರದ ಮಹರ್ಷಿ ದೇವ್ರಾಹ ಬಾಬಾ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು.
ಆಶಿಶ್ ಪ್ರಕಾರ ಎಪ್ರಿಲ್ 13 ರಂದು ಅನಾರೋಗ್ಯದಿಂದ ಬಳಲುತ್ತಿರುವ ತನ್ನ ಸಹೋದರನನ್ನು ನೋಡಲು ಪತ್ನಿಯೊಂದಿಗೆ ತನ್ನ ಅತ್ತೆ ಮನೆಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ತನ್ನ ಅತ್ತೆಯ ಮನೆಗೆ ತಲುಪಿದ ನಂತರ, ಅಮೃತಾ ರಾತ್ರಿಯಿಡೀ ಉಳಿಯಲು ವಿನಂತಿಸಿದಳು.
ಇಬ್ಬರೂ ಕೋಣೆಯಲ್ಲಿ ಮಲಗಿದ್ದಾಗ, ಅಮೃತಾ ರಾತ್ರಿ ಎದ್ದು ಅಡುಗೆಮನೆಯಿಂದ ಕುದಿಯುವ ನೀರನ್ನು ತೆಗೆದುಕೊಂಡು ತನ್ನ ಮೇಲೆ ಚೆಲ್ಲಿದ್ದಾಳೆ ಎಂದು ಆಶಿಶ್ ಆರೋಪಿಸಿದ್ದಾರೆ.
ಇದೇ ವೇಳೆ ಆಶಿಶ್ ಓಡಲು ಪ್ರಯತ್ನಿಸಿದಾಗ ಅವರ ಮಾವ ಥಳಿಸಿದ್ದಾರೆ. ಅವರ ಸೋದರ ಮಾವ ಅವರನ್ನು ಟೆರೇಸ್ ನಿಂದ ದೂಡಿದ್ದಾರೆ ಎಂದು ಆಶಿಶ್ ಆರೋಪಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth