1:11 PM Wednesday 22 - October 2025

ಕೊನೆಗೂ ಸಕ್ಸಸ್ ಆಯಿತು ಕತಾರ್ ಮಧ್ಯಸ್ಥಿಕೆ: ಇರಾನ್ ನ 6 ಬಿಲಿಯನ್ ಡಾಲರ್ ತೈಲ ಹಣ ಬಿಡುಗಡೆ ನಂತರ ಅಮೆರಿಕ ಮತ್ತು ಇರಾನ್ ಕೈದಿಗಳಿಗೆ ಬಿಡುಗಡೆ ಭಾಗ್ಯ

19/09/2023

ಇರಾನ್ ನಲ್ಲಿ ಬಂಧನಕ್ಕೊಳಗಾದ ಐವರು ಅಮೆರಿಕನ್ ನಾಗರಿಕರನ್ನು ಹೊತ್ತ ಕತಾರ್ ಜೆಟ್, ಅದೇ ಸಂಖ್ಯೆಯ ಇರಾನಿಯನ್ನರೊಂದಿಗೆ ಕೈದಿಗಳ ವಿನಿಮಯದ ಭಾಗವಾಗಿ ದೋಹಾಕ್ಕೆ ಆಗಮಿಸಿದೆ.

ಯುಎಸ್ ಅಧ್ಯಕ್ಷ ಜೋ ಬೈಡನ್ ಸರ್ಕಾರವು ಕನಿಷ್ಠ 6 ಬಿಲಿಯನ್ ಡಾಲರ್ ಇರಾನಿನ ಹಣವನ್ನು ಬಿಡುಗಡೆಗೊಳಿಸುವ ಹಾಗೂ ವಿವಾದಾತ್ಮಕ ಕೈದಿಗಳ ವಿನಿಮಯದ ನಂತರ ಸುಮಾರು ಒಂದು ದಶಕದಿಂದ ಇರಾನ್ ನಲ್ಲಿ ಬಂಧನದಲ್ಲಿದ್ದ ಅಮೆರಿಕನ್ ನಾಗರಿಕರನ್ನು ಬಿಡುಗಡೆ ಮಾಡಲಾಗಿದೆ.

ಈ ಒಪ್ಪಂದದ ಭಾಗವಾಗಿ ಟೆಹ್ರಾನ್ ಮತ್ತು ವಾಷಿಂಗ್ಟನ್ ತಲಾ ಐದು ಕೈದಿಗಳನ್ನು ವಿನಿಮಯ ಮಾಡಿಕೊಳ್ಳಲು ಒಪ್ಪಿಕೊಂಡಿದೆ. ದಕ್ಷಿಣ ಕೊರಿಯಾದಲ್ಲಿ ನಿರ್ಬಂಧಿಸಲಾದ ಹಣವನ್ನು ದೋಹಾದ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಯುಎಸ್ ಮತ್ತು ಇರಾನ್ ದೃಢಪಡಿಸಿದ ನಂತರ ಕತಾರ್ ವಿಮಾನವು ಐದು ಅಮೆರಿಕನ್ ಕೈದಿಗಳು ಮತ್ತು ಅವರ ಇಬ್ಬರು ಸಂಬಂಧಿಕರನ್ನು ಹೊತ್ತು ಟೆಹ್ರಾನ್ ನಿಂದ ಹೊರಟಿದೆ ಎಂದು ಮೂಲವನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಎರಡು ಬದ್ಧ ವೈರಿಗಳ ನಡುವೆ ಕತಾರ್ ಮಧ್ಯಸ್ಥಿಕೆಯಲ್ಲಿ ನಡೆದ ಈ ಅಪರೂಪದ ಒಪ್ಪಂದವು ವಿನಿಮಯ ಅನುಕ್ರಮವನ್ನು ಪೂರೈಸಿತು. ಇರಾನ್ ಮತ್ತು ಯುಎಸ್ ನಡುವೆ ಹಲವಾರು ತಿಂಗಳುಗಳಲ್ಲಿ ಕನಿಷ್ಠ ಎಂಟು ಸುತ್ತಿನ ಮಾತುಕತೆಗಳ ನಂತರ ಈ ಒಪ್ಪಂದ ನಡೆದಿದೆ.

ದ್ವಿ ಪೌರತ್ವ ಹೊಂದಿರುವ ಐವರು ಅಮೆರಿಕನ್ನರ ಆರೋಗ್ಯ ಉತ್ತಮವಾಗಿದೆ. ದೋಹಾ ನಂತರ ಯುಎಸ್ ಗೆ ಹೋಗಲಿದ್ದಾರೆ ಎಂದು ಇರಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಇತ್ತೀಚಿನ ಸುದ್ದಿ

Exit mobile version