9:26 PM Thursday 23 - October 2025

ಹಮಾಸ್ ಬಂಡುಕೋರರ ಸೆರೆಯಲ್ಲಿ ಅಮೆರಿಕ ಪ್ರಜೆಗಳು: ಹಮಾಸ್ ದಾಳಿಗೆ ಅಮೆರಿಕದ 22 ಜನರು ಸಾವು!

hamas
12/10/2023

ವಾಷಿಂಗ್ಟನ್: ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರ ದಾಳಿಯಲ್ಲಿ ಅಮೆರಿಕದ 22 ಮಂದಿ ನಾಗರಿಕರು ಸಾವನ್ನಪ್ಪಿದ್ದು, 17 ಮಂದಿಯ ಬಗ್ಗೆ ಇನ್ನೂ ಯಾವುದೇ ಮಾಹಿತಿಗಳು ದೊರೆತಿಲ್ಲ ಎಂದು ಶ್ವೇತಭವನ ತಿಳಿಸಿದೆ.

ಪ್ಯಾಲೆಸ್ಟೀನ್ ನ ಹಮಾಸ್ ಬಂಡುಕೋರರು ಹಲವಾರು ಅಮೆರಿಕನ್ನರನ್ನ ಒತ್ತೆಯಾಳುಗಳಾಗಿ ಇರಿಸಿದ್ದು, ಈ ಸಂಬಂಧ ಇಸ್ರೇಲ್ ಜೊತೆಗೆ ಸಂಪರ್ಕದಲ್ಲಿರೋದಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲೀವಾನ್ ತಿಳಿಸಿದ್ದಾರೆ.

ಈ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಪ್ರತಿಕ್ರಿಯಿಸಿ, ಇಸ್ರೇಲ್ ಮೇಲೆ ನಡೆದ ಉಗ್ರರ ದಾಳಿಯಲ್ಲಿ 22 ಮಂದಿ ಮೃತಪಟ್ಟಿದ್ದಾರೆ. ಹಮಾಸ್ ಬಂಡುಕೋರರು ಒತ್ತೆಯಾಳುಗಳಾಗಿ ಇರಿಸಿಕೊಂಡವರ ಪೈಕಿ ಅಮೆರಿಕ ಪ್ರಜೆಗಳು ಕೂಡ ಸೇರಿದ್ದಾರೆ ಎಂದು ತಿಳಿಸಿದ್ದಾರೆ.

ಹಮಾಸ್ ಬಂಡುಕೋರರನ್ನು ಮಟ್ಟಹಾಕಲು ಇಸ್ರೇಲ್ ಗೆ ಈಗಾಗಲೇ ಅಮೆರಿಕ ಶಸ್ತ್ರಾಸ್ತ್ರಗಳಗಳ ನೆರವನ್ನು ಘೋಷಿಸಿದೆ. ಇಸ್ರೇಲ್ ಮೇಲಿನ ದಾಳಿಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಖಂಡಿಸಿದ್ದಾರೆ. ಈಗಾಗಲೇ ಇಸ್ರೇಲ್ ಹಾಗೂ ಗಾಜಾ ಪಟ್ಟಿಯಲ್ಲಿ ಇದುವರೆಗೂ ಕನಿಷ್ಠ 3,900 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ.

ಇತ್ತೀಚಿನ ಸುದ್ದಿ

Exit mobile version