ಅಕ್ರಮ ಮರಳು ದಂಧೆ, ಭ್ರಷ್ಟಾಚಾರದ ವಿರುದ್ಧ ಜ.7ರಂದು ಬೃಹತ್ ಪ್ರತಿಭಟನೆ: ಕೆ.ವಸಂತ ಬಂಗೇರ

ಬೆಳ್ತಂಗಡಿ: ಮುಗೆರಡ್ಕದಲ್ಲಿ ನಡೆಯುವ ಅಕ್ರಮ ಮರಳು ದಂಧೆ, ಮತ್ತು 250 ಕೋಟಿ ವೆಚ್ಚದ ನೀರಾವರಿ ಯೋಜನೆಯಲ್ಲಿ ನಡೆಯುವ ಭ್ರಷ್ಟಾಚಾರ ಮತ್ತು ಸರಕಾರದ ಜನವಿರೋದಿ ನಡವಳಿಕೆಯ ವಿರುದ್ದ ಜ.7 ರಂದು ಮಿನಿ ವಿದಾನಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಿ, ಬಳಿಕ ಮೊಗೆರಡ್ಕದವರೆಗೆ ವಾಹನ ಜಾಥಾ ನಡೆಸಲಾಗುವುದು ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಸೋಮವಾರ ಬೆಳ್ತಂಗಡಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಗೇರಡ್ಕದವರೆಗೆ ವಾಹನ ರ್ಯಾಲಿ ನಡೆಸಿ ಅಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಹೊರ ಜಗತ್ತಿನ ಮುಂದಿಡಲಾಗುವುದು ಎಂದರು.
ಬೆಳ್ತಂಗಡಿ ತಾಲೂಕಿನಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು, ಅಕ್ರಮ ಮರಳು ದಂಧೆ, ಮರಗಳ್ಳತನ ಯಾವುದೇ ನಿಯಂತ್ರಣವಿಲ್ಲದೆ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಗಗನಕ್ಜೆ ಏರಿದೆ, ವಿಮಾನ ನಿಲ್ದಾಣ, ಕಾರ್ಖಾನೆ, ಬ್ಯಾಂಕ್ , ಎಲ್ ಐ ಸಿ, ಬಂದರುಗಳನ್ಬು ಖಾಸಗೀಕರಣಗೊಳಿಸುತ್ತಿದೆ. ಸರಕಾರ, ಯುವಕರಿಗೆ ಉದ್ಯೋಗ ನೀಡುತ್ತಿಲ್ಲ, ರಸಗೊಬ್ಬರ ಬೆಲೆಏರಿಕೆಯಿಂದ ರೈತರು ಕಂಗಾಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಜವಾಬ್ದಾರಿಯುತ ಸಚಿವರು ಅಡಿಕೆ ಬೆಳೆ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿ, ರೈತರನ್ನು ದಾರಿ ತಪ್ಪಿಸಲು ಹೊರಟಿದ್ದಾರೆ. ರೈತರ ಮುಂದೆ ಸಚಿವರು ಕ್ಷಮೆಯಾಚಿಸಬೇಕು. ರೈತರು ಇಂತಹ ಮಾತಿಗೆ ಕಿವಿಗೊಡಬೇಡಿ. ಅಡಿಕೆಗೆ ಉತ್ತಮ ಬೆಲೆ ಸಿಗಲಿದೆ. ಅಡಿಕೆ ಬೆಳೆಸಲು ಹಿಂಜರಿಯಬೇಡಿ, ಜಾತಿ ಧರ್ಮಗಳ ನಡುವೆ ವೋಟಿಗಾಗಿ ವಿಷ ಬೀಜ ಬಿತ್ತುವ ಕಾರ್ಯ ತಾಲೂಕಿನಲ್ಲಿ ನಡೆಯುತ್ತಿದ್ದು, ಇದರ ವಿರುದ್ದವೂ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಮಾಜಿ ಸಚಿವ ಗಂಗಾದರ ಗೌಡ ಮಾತನಾಡಿ, ಬಿಜೆಪಿ ಸರಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಜನರಿಗೆ ತಿಳಿಸುವ ಕಾರ್ಯ ಕಾಂಗ್ರೆಸ್ ಮಾಡುತ್ತಿದ್ದು ಮೊದಲ ಹಂತವಾಗಿ ಈ ಪ್ರತಿಭಟನೆ ನಡೆಯುತ್ತಿದ್ದು, ಬಳಿಕ ಜನರ ಬಳಿ ಇಂದಿರಾ ಗಾಂಧಿ ರಥಯಾತ್ರೆ ಮೂಲಕ ಗ್ರಾಮ ಗ್ರಾಮಗಳಿಗೆ ತೆರಳಿ ಜನರಿಗೆ ಸರಕಾರದ ವೈಫಲ್ಯ ಗಳನ್ನು ತಿಳಿಸಲಿದ್ದೇವೆ ಎಂದರು.
ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ರಂಜನ್ ಗೌಡ, ಶೈಲೇಶ್ ಕುಮಾರ್, ನಗರ ಪಂಚಾಯತ್ ಸದಸ್ಯ ಜಗದೀಶ್, ಮುಖಂಡರುಗಳಾದ ಕೇಶವಗೌಡ ಬೆಳಾಲು, ಅಶ್ರಪ್ ನೆರಿಯ, ಅಬ್ದುಲ್ ರಹಿಮಾನ್ ಪಡ್ಪು, ರವಿ ಕೋಟ್ಯಾನ್, ಎಸಿ ಮ್ಯಾಥ್ಯೂ, ಶೋಭಾ ನಾರಾಯಣ ಗೌಡ, ಭರತ್ ಕುಮಾರ್, ರವಿ, ನಾರಾಯಣ ಗೌಡ ಮುಂಡಾಜೆ, ಮೆಹಬೂಬ್ ಉಪಸ್ಥಿತರಿದ್ದರು.
ನೇತ್ರಾವತಿ ಉಳಿಸಿ ಪಾದಯಾತ್ರೆಗೆ ಬೆಂಬಲವಿಲ್ಲ:
ಜ.8 ರಿಂದ ನೇತ್ರಾವತಿ ಉಳಿಸಿ ನಡೆಯುವ ಪಾದಯಾತ್ರೆ ಬಗ್ಗೆ ಮಾಹಿತಿ ಇಲ್ಲ ಇದಕ್ಕೆ ನನ್ನ ಬೆಂಬಲವೂ ಇಲ್ಲ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw