10:59 PM Wednesday 15 - October 2025

15 ವರ್ಷದ ಬಾಲಕಿ ಗರ್ಭಿಣಿಯಾದ ಬಳಿಕ ಬೆಳಕಿಗೆ ಬಂತು ಅತ್ಯಾಚಾರ ಪ್ರಕರಣ

13/11/2020

ವೆಲ್ಲೂರು: 15 ವರ್ಷದ ಬಾಲಕಿಯನ್ನು ಸಂಬಂಧಿಯೇ ಅತ್ಯಾಚಾರ ಮಾಡಿದ್ದು, ಪರಿಣಾಮವಾಗಿ ಬಾಲಕಿ ಗರ್ಭಿಣಿಯಾಗಿದ್ದಾಳೆ. ಈ ಸಂಬಂಧ  ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮಣಿಮಾರನ್(38) ಬಂಧಿತ ಆರೋಪಿಯಾಗಿದ್ದಾನೆ. 15 ವರ್ಷದ ಬಾಲಕಿಯನ್ನು ಮದುವೆಯಾಗುವುದಾಗಿ ಒತ್ತಾಯಿಸುತ್ತಿದ್ದ ಈತ ಬಾಲಕಿಯನ್ನು ಅತ್ಯಾಚಾರ ನಡೆಸಿದ್ದ. ವೆಲ್ಲೂರು ವಸಂತಪುರಂ ನಿವಾಸಿಯಾಗಿದ್ದ ಈತ, ಬಾಲಕಿಯ ಮನೆಯವರಿಗೆ ಸಂಬಂಧಿಯೂ ಆಗಿದ್ದನೆನ್ನಲಾಗಿದೆ.

ಬಾಲಕಿ ಗರ್ಭಿಣಿ ಎನ್ನುವುದು ತಿಳಿಯುತ್ತಿದ್ದಂತೆಯೇ ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಭಯಗೊಂಡ ಬಾಲಕಿ ಈ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸಿದ್ದಾಳೆ.  ಆ ಬಳಿಕ ಬಾಲಕಿಯ ಕುಟುಂಬಸ್ಥರು ವೆಲ್ಲೂರಿನ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಾಲಕಿಯ ಪೋಷಕರ ದೂರಿನನ್ವಯ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆ ದಾಖಲಿಸಿ, ಬಂಧಿಸಲಾಗಿದ್ದು, ವೆಲ್ಲೂರು ಜೈಲಿನಲ್ಲಿ ಆತನನ್ನು ಇಡಲಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

Exit mobile version