5:56 PM Thursday 16 - October 2025

ವಿವಾಹವಾಗಿ ಸ್ವಲ್ಪ ದಿನದಲ್ಲೇ ಸೇವೆಗೆ ತೆರಳಿದ್ದ ಯೋಧ ಹುತಾತ್ಮ

09/11/2020

ನವದೆಹಲಿ: ಮದುವೆಯಾಗಿ ಸ್ವಲ್ಪ ದಿನದಲ್ಲೇ ಸೇವೆಗೆ ತೆರಳಿದ್ದ ಯೋಧ ಉಗ್ರರ ವಿರುದ್ಧದ ಭೀಕರ ಕಾಳಗದಲ್ಲಿ ಹುತಾತ್ಮರಾಗಿದ್ದು, ಜಮ್ಮು ಕಾಶ್ಮೀರದ ಮಚಿಲಿ ಸೆಕ್ಟರ್ ಉಗ್ರರ ವಿರುದ್ಧ ಕಾಳಗ ನಡೆದಿತ್ತು. ಈ ಯುದ್ಧದಲ್ಲಿ ನಾಲ್ವರು ಯೋಧರು ಇಂದು ಮೃತಪಟ್ಟಿದ್ದಾರೆ. ಈ ಪೈಕಿ ತೆಲಂಗಾಣದ ರಿಯಾಡಾ ಮಹೇಶ್, ಮದುವೆಯಾಗಿ ಕೆಲವೇ ದಿನಗಳಲ್ಲಿ ಸೇವೆಗೆ ಹಾಜರಾಗಿದ್ದರು.

26 ವರ್ಷದ ರಿಯಾಡಾ ಮಹೇಶ್ ನಿಜಾಮಾಬಾದ್‍ನ ಖಾಸಗಿ ಕಾಲೇಜಿನಲ್ಲಿ ಪಿಯು ಮುಗಿಸಿ,  2014ರಲ್ಲಿ ಸೇನೆ ಸೇರಿದ್ದರು. ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಚಿಲಿ ಸೆಕ್ಟರ್​ನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಉಗ್ರರ ನುಸುಳುವಿಕೆಯನ್ನು ತಡೆಯುವ ವೇಳೆ ಭೀಕರ ಕಾಳಗ ನಡೆಸಿದ್ದು, ಈ ಸಂದರ್ಭದಲ್ಲಿ ಮೂವರು ಯೋಧರು ಹಾಗೂ ಒಬ್ಬ ಬಿಎಸ್‍ಎಫ್ ಕಾನ್‍ ಸ್ಟೆಬಲ್ ಹುತಾತ್ಮರಾಗಿದ್ದರು. ಇವರಲ್ಲಿ ಮಹೇಶ್ ಕೂಡ ಒಬ್ಬರಾಗಿದ್ದಾರೆ.

 ಕೆಲವು ದಿನಗಳ ಹಿಂದೆಯಷ್ಟೇ ಮನೆಗೆ ಕರೆ ಮಾಡಿದ್ದ ಮಹೇಶ್, ಜಮ್ಮುವಿನಲ್ಲಿ ತಾನು ಕೆಲಸಕ್ಕೆ ನಿಯೋಜನೆಯಾಗಿರುವ ವಿಚಾರವನ್ನು ತಿಳಿಸಿದ್ದರು. ನಂತರ ಮನೆಗೆ ಬರುವುದಾಗಿಯೂ ಹೇಳಿಕೊಂಡಿದ್ದರು. ಆದರೆ ಅವರು ಹುತಾತ್ಮರಾಗಿದ್ದಾರೆ. ತಮ್ಮ ಮಗನ, ಪತಿಯ ಬರುವಿಕೆಗೆ ಕಾಯುತ್ತಿದ್ದ ಕುಟುಂಬಸ್ಥರು ಕೇಳಬಾರದ ಸುದ್ದಿಯನ್ನು ಕೇಳಿ ಅರಗಿಸಿಕೊಳ್ಳಲಾಗದೇ ರೋದಿಸುತ್ತಿದ್ದಾರೆ. ಮಹೇಶ್ ಅವರ ಪತ್ನಿಗೆ ಸಮಾಧಾನ ಹೇಳುವ ಶಕ್ತಿಯೂ ಯಾರಿಗೂ ಇಲ್ಲದಂತಾಗಿದೆ.

ಸಾಂದರ್ಭಿಕ ಚಿತ್ರ

ಇತ್ತೀಚಿನ ಸುದ್ದಿ

Exit mobile version